ಅಭಿಮಾನಿಗಳ ಕಷ್ಟಕ್ಕೆ ಹೆಗಲಾದ ನಟ ಯಶ್: ಅಗಲಿದ ಫ್ಯಾನ್ಸ್ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ನೆರವು!
ಅವಘಡದಲ್ಲಿ ನಿಧನ ಆದ ಅಭಿಮಾನಿಗಳ ಕುಟುಂಬವನ್ನ ಭೇಟಿ ಮಾಡಿರೋ ಯಶ್ರ ಆಪ್ತ ಸಹಾಯಕ ಚೇತನ್ ಯಶ್ ಕೊಟ್ಟಿರೋ ಪರಿಹಾರ ಹಣವನ್ನ ತಲುಪಿಸಿದ್ದಾರೆ. ಪ್ರತಿ ಅಭಿಮಾನಿ ಕುಟುಂಬಕ್ಕೆ ನಟ ಯಶ್ ಐದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.
ಜನವರಿ 8ಕ್ಕೆ ನಟ ಯಶ್ ಹುಟ್ಟುಹಬ್ಬ. ಈ ದಿನ ಬಂದ್ರೆ ಯಶ್ ಮೈನಡುಗುತ್ತೆ. ಯಾಕಂದ್ರೆ ಯಶ್ ಪ್ರತಿ ಬರ್ತ್ಡೇಯಲ್ಲಿ ಏನಾದ್ರು ಒಂದು ಅವಘಡ ಸಂಭವಿಸುತ್ತೆ. ಈ ಭಾರಿ ಕೂಡ ಯಶ್ ಬರ್ತ್ಡೇ ಪ್ರಯುಕ್ತ ಫ್ಲೆಕ್ಸ್ ಕಟ್ಟಲು ಹೋದ ಮೂವರು ಯುವಕರು ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಬಳಿಕ ಯಶ್ ಗೋವಾದಿಂದ ಸೂರಣಗಿ ಗ್ರಾಮಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ರು. ಈಗ ಅಗಲಿದ ಅಭಿಮಾನಿಗಳ ಕುಟುಂಬಕ್ಕೆ ಯಶ್ ನೆರವಾಗಿದ್ದಾರೆ.
ಅವಘಡದಲ್ಲಿ ನಿಧನ ಆದ ಅಭಿಮಾನಿಗಳ ಕುಟುಂಬವನ್ನ ಭೇಟಿ ಮಾಡಿರೋ ಯಶ್ರ ಆಪ್ತ ಸಹಾಯಕ ಚೇತನ್ ಯಶ್ ಕೊಟ್ಟಿರೋ ಪರಿಹಾರ ಹಣವನ್ನ ತಲುಪಿಸಿದ್ದಾರೆ. ಪ್ರತಿ ಅಭಿಮಾನಿ ಕುಟುಂಬಕ್ಕೆ ನಟ ಯಶ್ ಐದು ಲಕ್ಷ ರೂಪಾಯಿ ನೆರವು ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರೋ ಅಭಿಮಾನಿಗಳ ಕುಟುಂಬಕ್ಕೂ ನೆರವಾಗೋ ಭರವಸೆ ಕೊಟ್ಟಿದ್ದಾರೆ. ಈ ಮೂಲಕ ತನ್ನ ಫ್ಯಾನ್ಸ್ಗೆ ಯಾವ್ದೇ ಸಮಸ್ಯೆ ಆದ್ರು ಅವರ ಕಷ್ಟಕ್ಕೆ ನಾನು ಹೆಗಲಾಗುತ್ತೇನೆ ಅಂತ ಯಶ್ ಹೇಳಿದ್ದಾರೆ.