ಕನ್ನಡ ರಾಜ್ಯೋತ್ಸವಕ್ಕೆ ಯಶ್ ಕೊಡ್ತಾರೆ ಗುಡ್ ನ್ಯೂಸ್ ?ನ .01ಕ್ಕೆ ಅನೌನ್ಸ್ ಆಗೋದು ಯಶ್ 19ನಾ ? ರಾಮಾಯಣನಾ ?
ರಾಕಿಂಗ್ ಸ್ಟಾರ್ ಯಶ್ 19 ಸಿನಿಮಾಗಾಗಿ ಕಾದು ಕಾದು ಸುಸ್ತ್ ಆಗಿದೆ ಕಂಡ್ರಿ ಇನ್ನೂ ಆ ಸಮಸ್ಯೆ ಬಗೆ ಹರಿದಿಲ್ವಲ್ರಿ ಅಂತ ರಾಕಿಂಗ್ ಸ್ಟಾರ್ ಫ್ಯಾನ್ಸ್ ಯಡವಟ್ಟಾಯ್ತು ತಲೆ ಕೆಟ್ ಹೋಯ್ತು ಅಂತಿದ್ದಾರೆ. ಆದ್ರೆ ರಾಕಿ ಮಾತ್ರ ಯಾವ್ ತಲೆನೂ ಕೆಡಿಸಿಕೊಳ್ಳದೆ ಒಳಗೊಳಗೆ ತನ್ನ ಮುಂದಿನ ಮೂವಿ ಪ್ಲ್ಯಾನಿಂಗ್ ಮಾಡಿ ರೆಡಿಯಾಗಿದ್ದಾರಂತೆ.
ನವೆಂಬರ್ 1 ಬಂದೇ ಬಿಡ್ತು. ಕರುನಾಡದಲ್ಲಿ ಕನ್ನಡದ ಹಬ್ಬ ನಡೆಯುತ್ತೆ. ಈ ಕನ್ನಡ ರಾಜ್ಯೋತ್ಸವಕ್ಕೆ(Kannada Rajyotsava) ರಾಕಿ ರಾಕಿಂಗ್ ಸುದ್ದಿ ಕೊಡ್ತಾರೆ ಅಂತ ಹೊಸ ಕತೆ ಶುರುವಾಗಿದೆ. ಈ ಕನ್ನಡ ರಾಜ್ಯೋತ್ಸವದಂದೇ ಯಶ್ (Yash) ಹೊಸ ಸಿನಿಮಾ ಅನೌನ್ಸ್ ಮಾಡ್ತಾರೆ ಅಂತ ರಾತ್ರೋ ರಾತ್ರಿ ರಂಗೀನ್ ಕತೆ ಹುಟ್ಟಿಕೊಂಡಿದೆ. ಯಶ್ ಸಿನಿಮಾ ಅನೌನ್ಸ್ ಬಗ್ಗೆ ಹರಿದಾಡಿರೋ ಕತೆ ಕಾದಂಬರಿಗಳು ಒಂದೇ ಎರಡನೇ. ಯಶ್ ಗೀತು ಮೋಹನ್ ದಾಸ್ ಸಿನಿಮಾ ಲಾಕ್ ಆಗಿದೆ. ಇನ್ನೇನ್ ಅನೌನ್ಸ್ ಆಗೇ ಬಿಡ್ತು ಅಂತ ಹೇಳಿದ್ರು. ಆದ್ರೆ ಅದಕ್ಕಿನ್ನೂ ಮಹೂರ್ಥ ಸಿಕ್ಕಿಲ್ಲ. ಆ ಕಡೆ ಬಾಲಿವುಡ್ನಲ್ಲಿ ರಾಮಾಯಣ(Ramayana movie) ಕತೆಗೆ ಯಶ್ ರಾವಣ(Ravana) ಆಗ್ತಾರೆ ಅಂತ ಬ್ಯಾಂಗ್ ಬ್ಯಾಂಗ್ ಸುದ್ದಿ ಹೊರ ಬಿದ್ದಿದೆ. ಆದ್ರೆ ಅದು ಕೂಡ ಅಧಿಕೃತವಾಗಿಲ್ಲ. ಈಗ ಕನ್ನಡ ರಾಜ್ಯೋತ್ಸವಕ್ಕೆ ಯಶ್ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಅಂತ ಹೇಳಲಾಗ್ತಿದೆ. ಇದು ಯಶ್ 19 ಸಿನಿಮಾನಾ(Yash 19 movie) ಅಥವಾ ರಾಮಾಯಣ ಸಿನಿಮಾನಾ ಅನ್ನೋ ಕುತೂಹಲ ಸೃಷ್ಟಿಸಿದೆ. ರಾಕಿಂಗ್ ಸ್ಟಾರ್ ಯಶ್ ತನ್ನ 19ನೇ ಸಿನಿಮಾ ಸಿದ್ಧತೆ ಮಾಡಿರೋದಂತು ನಿಜ. ಆದ್ರೆ ಯಶ್ ಮಾತ್ರ ಈ ಬಗ್ಗೆ ಎಲ್ಲೂ ತುಟಿ ಬಿಚ್ಚಿಲ್ಲ. ಯಶ್ ಹೇಳ್ದೇ ಇದ್ರೂ ಯಶ್19ಗೆ ಗೀತು ಮೋಹನ್ ದಾಸ್ ಡೈರೆಕ್ಟರ್, ಕೆವಿಎನ್ ಹಾಗು ಯಶ್ ಜಂಟಿಯಾಗಿ ನಿರ್ಮಾಣ ಮಾಡ್ತಾರೆ. ಮಲಯಾಳಂ ನಟಿ ಸಂಯುಕ್ತಾ ಮೆನನ್ ಹೀರೋಯಿನ್, ಚರಣ್ ರಾಜ್ ಮ್ಯೂಸಿಕ್ ಡೈರೆಕ್ಟರ್ ಅನ್ನೋ ಸುದ್ದಿ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದ್ರೂ ಈ ವಿಷಯ ತಿಳಿದು ಯಶ್ ಫ್ಯಾನ್ಸ್ ಖುಷಿ ಪಡುತ್ತಿರೋದು ಮಾತ್ರ ನಿಜ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್ 'ಭೀಮ'ನಿಗೆ ತಲೈವಾ ಬುಲಾವ್! ರಜನಿಕಾಂತ್ ಸಿನಿಮಾದಲ್ಲಿ ದುನಿಯಾ ವಿಜಯ್ !