Yash: ಜನವರಿ 8ಕ್ಕೆ ನ್ಯಾಷನಲ್ ಸ್ಟಾರ್ ಯಶ್‌ಗೆ ಬರ್ತ್ಡೇ..! ಹುಟ್ಟುಹಬ್ಬಕ್ಕೆ ಸಿದ್ಧವಾಗಿದೆ 'ಟಾಕ್ಸಿಕ್' ಸ್ಪೆಷಲ್ ಕಿಕ್..!
ರಾಕಿಂಗ್ ಸ್ಟಾರ್ ಯಶ್ ತನ್ನ 19ನೇ ಸಿನಿಮಾ ಟಾಕ್ಸಿಕ್ ಅನೌನ್ಸ್ ಮಾಡಿದ್ಮೇಲೆ ಸೈಲೆಂಟ್ ಆದ್ರಲ್ಲಾ.? ಯಶ್ ಬಗ್ಗೆ ಮತ್ತೆ ಯಾವ್ ಸುದ್ದಿನೂ ಬರ್ತಿಲ್ವಲ್ಲಾ..? ಹಾಗಂತ ಯಶ್ ಸುನ್ನಮೇ ಕೂತಿಲ್ಲ. ರಾಕಿ ದೊಡ್ಡ ಹಬ್ಬವೊಂದಕ್ಕೆ ಸಜ್ಜಾಗುತ್ತಿದ್ದಾರೆ. ಆ ಹಬ್ಬವನ್ನ ಈ ಭಾರಿ ಫ್ಯಾನ್ಸ್ ಜೊತೆಗೆ ಮಾಡೋ ನಿರ್ಧಾರ ಮಾಡಿದ್ದಾರಂತೆ. ಅಷ್ಟಕ್ಕೂ ಆ ಹಬ್ಬ ಬೇರೇನು ಅಲ್ಲ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬ.
ಯಶ್ ಜನ್ಮದಿನ ಅಂದ್ರೆ ಕೇಳ್ಬೇಕಾ. ಸೆಲೆಬ್ರೇಷನ್ ಪೀಕ್‌ನಲ್ಲಿರುತ್ತೆ. ಫ್ಯಾನ್ಸ್ ಬಳಗದಲ್ಲಿ ಯಶ್ ವೈಬ್ರೇಷನ್ ಹೈ ಇರುತ್ತೆ. ಇನ್ನೇನು ಯಶ್ ಹುಟ್ಟುಹಬ್ಬ(Birthday) ಬಂದೇ ಬಿಟ್ಟಿದೆ. ಜನವರಿ 8ಕ್ಕೆ ರಾಕಿಗೆ ಬರ್ತ ಡೇ. ಈ ಭಾರಿ ಹುಟ್ಟುಹಬ್ಬದ ದಿನ ಯಶ್(Yash) ಟಾಕ್ಸಿಕ್ ಕಿಕ್ ಕೊಡೋದು ಕನ್ಫರ್ಮ್. ಅದಕ್ಕಾಗಿ ರಾಕಿ ಎಲ್ಲಾ ತಯಾರಿ ಮಾಡಿಕೊಂಡದ್ದಾರೆ. ಹೊಸ ವರ್ಷದಿಂದ ಯಶ್ ಹೊಸ ಪರ್ವ ಆರಂಭ ಆಗ್ತಿದೆ. ಯಶ್ ನ್ಯೂ ಈಯರ್(New Year) ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡ್ತಿದ್ದಾರೆ. ಫ್ಯಾಮಿಲಿ ಜೊತೆ ಹೊಸ ವರ್ಷಾಚಣೆ ಮಾಡೋ ರಾಕಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಮಾಡಿಕೊಳ್ಳೋ ನಿರ್ಧಾರ ಮಾಡಿದ್ದಾರಂತೆ. ಯಶ್ರನ್ನ ಭೇಟಿ ಆಗೋಕೆ ಯಾರೆಲ್ಲಾ ಕಾಯುತ್ತಿದ್ರೋ ಅವರಿಗೆಲ್ಲಾ ಜನವರಿ 8ಕ್ಕೆ ರಾಕಿ ನೇರಾ ನೇರಾ ಭೇಟಿ ಮಾಡ್ತಾರೆ. ಆ ಭೇಟಿಯ ಜಾಗ ಮತ್ತು ಸಮಯ ನಿಗಧಿ ಆಗೋದೊಂದೇ ಭಾಕಿ ಅಂತ ಯಶ್ ಆಪ್ತ ಗೆಳೆಯರು ಹೇಳ್ತಿದ್ದಾರೆ. ಯಶ್ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಮಾಡೋದೊಂದೇ ಅಲ್ಲ. ರಾಕಿ ತನ್ನ ಡೈ ಹಾರ್ಡ್ ಫ್ಯಾನ್ಸ್ಗೆ ಭರ್ಜರಿ ಬಾಡೂಟ ರೆಡಿ ಮಾಡಿದ್ದಾರೆ. ಟಾಕ್ಸಿಕ್ ಟೈಟಲ್ ಅನೌನ್ಸ್ ಮಾಡಿ ವರ್ಲ್ಡ್ ವೈಡ್ ಕ್ರೇಜ್ ಸೃಷ್ಟಿಸಿದ್ದ ಯಶ್ ಹುಟ್ಟುಹಬ್ಬದ ದಿನ ಅದೇ ಟಾಕ್ಸಿಕ್ನ ಚಿಕ್ಕಗೊಂದು ಗ್ಲಿಮ್ಸ್ ಬಿಡಲಿದ್ದಾರೆ. ಈ ಗ್ಲಿಮ್ಸ್ನಲ್ಲಿ ಯಶ್ ಲುಕ್ ರಿವೀಲ್ ಆಗಲಿದೆಯಂತೆ. ಹೀಗಾಗಿ ರಾಕಿ ಹುಟ್ಟುಹಬ್ಬ ಈ ಭಾರಿ ಸಿಕ್ಕಾಪಟ್ಟೆ ರಂಗಾಗಿರುತ್ತೆ.
ಇದನ್ನೂ ವೀಕ್ಷಿಸಿ: Kaatera Movie Interview : ಕಾಟೇರ ಸಿನಿಮಾ ಯಾಕೆ ನೋಡಬೇಕು..? ಕುಮಾರ್ ಗೋವಿಂದ್ ಏನ್ ಹೇಳ್ತಾರೆ..!