Kaatera Movie Interview : ಕಾಟೇರ ಸಿನಿಮಾ ಯಾಕೆ ನೋಡಬೇಕು..? ಕುಮಾರ್ ಗೋವಿಂದ್ ಏನ್‌ ಹೇಳ್ತಾರೆ..!

ಕಾಟೇರ ಸಿನಿಮಾದ ಬಗ್ಗೆ ನಟಿ ಶ್ರುತಿ, ಕುಮಾರ್‌ ಗೋವಿಂದ್‌, ನಟ ಅವಿನಾಶ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದು, ಏನ್‌ ಹೇಳಿದ್ದಾರೆ ನೀವೆ ಕೇಳಿ..

Share this Video
  • FB
  • Linkdin
  • Whatsapp

ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ (Kaatera movie) ಇದೇ ಡಿಸೆಂಬರ್ 29ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಿದೆ. ವರ್ಷದ ಕೊನೆಯಲ್ಲಿ ತೆರೆಗೆ ಬರೋ ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರು ಒಂದು ಕಣ್ಣಿಟ್ಟಿದ್ದಾರೆ. ರಾಕ್ ಲೈನ್ ವೆಂಕಟೇಶ್(Rockline Venkatesh) ನಿರ್ಮಾಣದ ಕಾಟೇರ ಸಿನಿಮಾದಲ್ಲಿ ನಟ ದರ್ಶನ್‌ಗೆ(Darshan) ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ(Aradhana Ram) ನಾಯಕಿಯಾಗಿ ನಟಿಸುತ್ತಿದ್ದಾರೆ. ಆರಾಧನಾಗೆ ಇದು ಡೆಬ್ಯೂ ಸಿನಿಮಾವಾಗಿದೆ. ಚಿತ್ರದಲ್ಲಿ ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್​ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ವೀಕ್ಷಿಸಿ:  ಸಕ್ಕರೆ ನಾಡಿನಿಂದ ಸ್ಪರ್ಧೆಗೆ ಎಚ್‌ಡಿಕೆಗೆ ಬಿಜೆಪಿ ಓಪನ್ ಆಫರ್..! ಪುತ್ರನ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟರಾ ದಳಪತಿ..?

Related Video