Cinema Hungama: ರಿಷಬ್ ಶೆಟ್ಟಿ ಮಗಳು ರಾದ್ಯಳ ಹುಟ್ಟುಹಬ್ಬ ಹೇಗಿತ್ತು?

ರಿಷಬ್‌ ಶೆಟ್ಟಿ ಅವರ ಮಗಳು ರಾದ್ಯಾಗಳ ಮೊದಲ ವರ್ಷ ಹುಟ್ಟುಹಬ್ಬ ಆಚರಿಸಿದ್ದಾರೆ. ಮಗಳು ರಾದ್ಯಾಳಿಗೆ ಈಗ ಒಂದು ವರ್ಷ ಪೂರೈಸಿದ್ದಕ್ಕೆ ರಿಷಬ್‌ ದಂಪತಿ ಚಂದದೊಂದು ಫೋಟೋಶೂಟ್‌ ಮಾಡಿಸಿದ್ದಾರೆ. ಬಿಳಿ ಮತ್ತು ಹಸಿರು ಬಣ್ಣದ ಡ್ರೆಸ್‌ನಲ್ಲಿ ರಾದ್ಯಾ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

First Published Mar 21, 2023, 10:41 PM IST | Last Updated Mar 21, 2023, 10:41 PM IST

ಬೆಂಗಳೂರ(ಮಾ.21): ಡಿವೈನ್‌ ಸ್ಟಾರ್‌ ರಿಷಬ್ ಶೆಟ್ಟಿ ಪಕ್ಕಾ ಸಂಸಾರಿ ಪ್ರೀತಿಸಿದ ಹುಡುಗಿಯನ್ನ ಕೈಹಿಡಿದು ಇಬ್ಬರು ಮಕ್ಕಳಿರೋ ತುಂಬು ಕುಟುಂಬ ರಿಷಬ್‌ರದ್ದು. ಈ ತುಂಬು ಸಂಸಾರದಲ್ಲಿ ಇದೀಗ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ರಿಷಬ್‌ ಶೆಟ್ಟಿ ಅವರ ಮಗಳು ರಾದ್ಯಾಗಳ ಮೊದಲ ವರ್ಷ ಹುಟ್ಟುಹಬ್ಬ ಆಚರಿಸಿದ್ದಾರೆ. ಮಗಳು ರಾದ್ಯಾಳಿಗೆ ಈಗ ಒಂದು ವರ್ಷ ಪೂರೈಸಿದ್ದಕ್ಕೆ ರಿಷಬ್‌ ದಂಪತಿ ಚಂದದೊಂದು ಫೋಟೋಶೂಟ್‌ ಮಾಡಿಸಿದ್ದಾರೆ. ಬಿಳಿ ಮತ್ತು ಹಸಿರು ಬಣ್ಣದ ಡ್ರೆಸ್‌ನಲ್ಲಿ ರಾದ್ಯಾ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅವಳ ತುಂಟಾಟದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕ್ಯೂಟ್‌ ವಿಡಿಯೋ ರಿಷಬ್‌ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

'ಗೋ ಬ್ಯಾಕ್ ಸೋಮಣ್ಣ' ಚಾಮರಾಜನಗರದಿಂದ ಕಣಕ್ಕಿಳಿಯಲು ಮುಂದಾದ ವಿ.ಸೋಮಣ್ಣಗೆ ಬಿಗ್ ಶಾಕ್!

Video Top Stories