Asianet Suvarna News Asianet Suvarna News

ದೈವದ ಚಿತ್ರ ಕಾಂತಾರ ಚಾಪ್ಟರ್1ಗೆ ವರುಣ ದೇವನ ಕಾಟ..! ಮಳೆಯಿಂದ ಶೂಟಿಂಗ್ ನಿಲ್ಲಿಸಿದ್ರು ರಿಷಬ್ ಶೆಟ್ಟಿ..!

ಬರ್ತಡೇ ಮಾಡಿಕೊಂಡಿರೋ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್1 ಸಿನಿಮಾ ಶೂಟಿಂಗ್‌ಗೆ ಹೋಗಬೇಕಿತ್ತು. ಆದ್ರೆ ಅದಕ್ಕೆ ದೈವದ ಅಭಯ ಬೇಕಲ್ವಾ..? ಈ ಭಾರಿ ಯಾಕೆ ದೈವದ ಆಶೀರ್ವಾದ ಸಿಕ್ಕಿಲ್ಲ ಅಂತ ಕಾಂತಾರ ಶೂಟಿಂಗ್‌ ಕ್ಯಾನ್ಸಲ್ ಆಗಿದೆ. 


ರೈತರಿಗೆ ಮಳೆ ಬಂದ್ರೆನೆ ಬೆಳೆ ಚೆನ್ನಾಗಿ ಆಗೋದು. ಆದ್ರೆ ಸಿನಿಮಾದವರಿಗೆ ಮಳೆ (Rain) ಬಂದ್ರೆ ಬಣ್ಣವೆಲ್ಲಾ ತೊಳೆದು ಹೋಗುತ್ತೆ. ಹೀಗಾಗಿ ಈ ಮಳೆಗಾಲದಲ್ಲಿ ಸಿನಿಮಾ ಶೂಟಿಂಗ್(Shooting) ಸ್ವಲ್ಪ ಕಷ್ಟ. ಆದರಲ್ಲೂ ಈ ಭಾರಿ ಉಡುಪಿ ಮಂಗಳೂರು ಭಾಗದಲ್ಲಿ ಹೇರಳವಾಗಿ ಬಿಟ್ಟು ಬಿಡದೆ ಮಳೆ ಬರುತ್ತಿದೆ. ಈ ವರುಣ ದೇವನ ಕಾಟ ಕಾಂತಾರ ಚಾಪ್ಟರ್(Kantara 1 movie) ಒನ್ ಸಿನಿಮಾಗೂ ತಾಗಿದ್ದು, ಸಿನಿಮಾದ ಶೂಟಿಂಗ್ ಗೆ ಬ್ರೇಕ್ ಕೊಡಲಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ಕುಂದಾಪುರದ ಕೆರಾಡಿಯಲ್ಲಿ ನಡೆಯುತ್ತಿದೆ. ಸಿನಿಮಾದ ಶೂಟಿಂಗ್ ಅವಕಾಶ ಕೊಡದಷ್ಟು ಮಳೆ ಆ ಭಾಗದಲ್ಲಿ ಬರುತ್ತಿದೆ. ಎರಡನೇ ಶೆಡ್ಯೂಲ್ ಶೂಟಿಂಗ್ ಮಾಡುತ್ತಿದ್ದ ರಿಷಬ್‌ಗೆ (Rishab shetty)ಮಳೆರಾಯನ ತೊಂದರೆ ಎದುರಾಗಿದೆ. ಹೀಗಾಗಿ ಜುಲೈ 15 ವರೆಗೆ ಸಿನಿಮಾದ ಶೂಟಿಂಗ್ ನಿಲ್ಲಿಸಲಾಗಿದೆ. ಹೊಂಬಾಳೆ ಬ್ಯಾನರ್‌ನ ಕಾಂತಾರ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ವಿಜೃಂಬಿಸೋದು ಪಕ್ಕಾ. ಅದಕ್ಕಾಗಿ ರಿಷಬ್ ಪ್ಯಾನ್ ಇಂಡಿಯಾ ಇಮೇಜ್ ಇರೋ ಸ್ಟಾರ್ ಕಲಾವಿಧರನ್ನೇ ಗುಡ್ಡೆ ಹಾಕಿದ್ದಾರೆ. ಆದ್ರೆ ಈ ಭಾರಿ ಕಾಂತಾರದಲ್ಲಿ ಯಾರೆಲ್ಲಾ ಇರುತ್ತಾರೆ ಅನ್ನೋದನ್ನ ರಿವೀಲ್ ಮಾಡಿಲ್ಲ. ಬ್ರೇಕ್ ತೆಗೆದುಕೊಳ್ಳದೇ ಕಾಂತಾರದ ಕೆಲಸ ಮಾಡುತ್ತಿರೋ ರಿಷಬ್ ಇದುವರೆಗು ಶೇಕಡ 40ರಷ್ಟು ಶೂಟಿಂಗ್ ಮುಗಿಸಿದ್ದಾರೆ. ಮಳೆ ಕಡಿಮೆ ಆದ ನಂತರ ಮತ್ತೆ ಚಿತ್ರೀಕರಣ ಶುರುಮಾಡಲಿದ್ದಾರೆ ರಿಷಬ್.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ನಾಗಾರಾಧನೆ ಮಾಡಿ, ಇದರಿಂದ ದೊರೆಯುವ ಫಲಗಳೇನು ಗೊತ್ತಾ ?

Video Top Stories