Asianet Suvarna News Asianet Suvarna News

ದೊಡ್ಮನೆ 'ಯುವ'ರಾಜನಿಗೆ ಐಶ್ವರ್ಯಾ ನಾಯಕಿ?: ಗ್ರೀನ್ ಸಿಗ್ನಲ್ ಕೊಡುತ್ತಾ ಉಪ್ಪಿ ಕುಟುಂಬ?

ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಐಶ್ವರ್ಯಾ ನಾಯಕಿಯಾಗುವ ಬಗ್ಗೆ ಸುದ್ದಿಯೊಂದು ಹೊರ ಬಂದಿದೆ.
 

ನಟ ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವ ರಾಜ್ ಕುಮಾರ್ ನಾಯಕ ನಟನಾಗಿ 2023ಕ್ಕೆ ಎಂಟ್ರಿ ಕೊಡಲಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ಂ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಈ ಚಿತ್ರಕ್ಕೆ ನಾಯಕಿಯಾಗಿ ನಟಿಸುವಂತೆ ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯ ಉಪೇಂದ್ರಗೆ ಆಫರ್ ಮಾಡಿದೆ ಹೊಂಬಾಳೆ ಪ್ರೊಡಕ್ಷನ್. ಇದಕ್ಕೆ ಉಪ್ಪಿ ಕುಟುಂಬ ಗ್ರೀನ್ ಸಿಗ್ನಲ್ ಕೊಡುತ್ತಾ ಕಾದು ನೋಡ್‌ಬೇಕು.