Asianet Suvarna News Asianet Suvarna News

ಅಂದು ಕೃಷ್ಣ, ಇಂದು ವಿಷ್ಣು ಪಾತ್ರದಲ್ಲಿ ಕ್ರೇಜೀ ಸ್ಟಾರ್ ಕಿಕ್: ಐತಿಹಾಸಿಕ ಪಾತ್ರಗಳಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್!

ಕನ್ನಡದಲ್ಲಿ ಐತಿಹಾಸಿಕ ಪೌರಾಣಿಕ ಭಕ್ತಿಪ್ರಧಾನ ಪಾತ್ರಗಳು ಎಂದರೆ ಮೊದಲಿಗೆ ನೆನಪಾಗುವುದೇ ಅಣ್ಣಾವ್ರು. ಡಾ.ರಾಜ್‌ಕುಮಾರ್,  ವಿಷ್ಣುವರ್ಧನ್,  ಶ್ರೀನಾಥ್ , ಅನಂತ್‌ನಾಗ್ ಮೊದಲಾದವರು ಒಂದುಕಾಲದಲ್ಲಿ ಭಕ್ತಿಪ್ರಧಾನ ಪಾತ್ರಗಳಲ್ಲಿ ಜನಪ್ರಿಯರಾದರು. 
 

ಸ್ಯಾಂಡಲ್‌ವುಡ್ ಬೆಳ್ಳಿತೆರೆಯನ್ನು ತಮ್ಮ ಕನಸುಗಳ ಬಣ್ಣದಿಂದ ಸಿಂಗಾರಗೊಳಿಸಿದ ಕಲಾವಿದ ರವಿಚಂದ್ರನ್ ಈ ಬಾರಿ ವಿಷ್ಣುವಿನ ಅವತಾರವೆತ್ತುತ್ತಿದ್ದಾರೆ.  ಹುಟ್ಟುಹಬ್ಬದಂದು ಸಿನಿಮಾದ ಈ ಅಚ್ಚರಿಯ ವಿಚಾರ ಅಧಿಕೃತವಾಗಿ ಹೊರಬಿದ್ದಿದೆ. ಈ ಹಿಂದೆ ರವಿಮಾಮ ಕೃಷ್ಣನ ಅವತಾರವೆತ್ತಿದ್ದು ನಿಮಗೆಲ್ಲ ಗೊತ್ತೇ ಇದೆ. ಸ್ಯಾಂಡಲ್‌ವುಡ್ ಕೃಷ್ಣನಾಗಿ ಕ್ರೇಜಿ ಸ್ಟಾರ್ ಕಿಕ್ ಕೊಟ್ಟಿದ್ದರು.  ಅಂದಹಾಗೆ ರವಿಚಂದ್ರನ್‌ನನ್ನು ವಿಷ್ಣು ಅವತಾರದಲ್ಲಿ ನೋಡುವಂತೆ ಮಾಡುತ್ತಿರುವುದು ನಿರ್ದೇಶಕ  ಪುರುಷೋತ್ತಮ್. ಸ್ಯಾಂಡಲ್‌ವುಡ್‌ನಲ್ಲಿ ಅವರು ಈಗಾಗಲೇ ಭಕ್ತಿ ಪ್ರಧಾನ ಸಿನಿಮಾಗಳಿಗೆ ತುಂಬ ಫೇಮಸ್ ಆಗಿದ್ದಾರೆ. ಹಾಗೆಯೇ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಎನ್. ಎಸ್ .ರಾಜ್‌ಕುಮಾರ್. 

ಇದನ್ನೂ ವೀಕ್ಷಿಸಿ: ಸಿನಿ ಜರ್ನಿಯಲ್ಲಿ ಡಾಲಿಗೆ ದಶಕದ ಸಂಭ್ರಮ: ಅವಮಾನ ಮೆಟ್ಟಿ ನಿಂತ ನಟ ರಾಕ್ಷಸ ಧನಂಜಯ್ !