ಸಿನಿ ಜರ್ನಿಯಲ್ಲಿ ಡಾಲಿಗೆ ದಶಕದ ಸಂಭ್ರಮ: ಅವಮಾನ ಮೆಟ್ಟಿ ನಿಂತ ನಟ ರಾಕ್ಷಸ ಧನಂಜಯ್ !
ಕೆಲಸ ಬಿಟ್ಟು ರಂಗಭೂಮಿ ಸೇರಿದ್ದ ನಟ ಧನಂಜಯ್ ನಿರ್ದೇಶಕ ಗುರುಪ್ರಸಾದ್ ಪರಿಚಯದಿಂದ ಚಿತ್ರರಂಗ ಪ್ರವೇಶಿಸಿದ್ರು. ಸಿನಿಮಾದಲ್ಲಿ ಅವಕಾಶಕ್ಕಾಗಿ ಡೈರೆಕ್ಟರ್ ಮನೆಯಲ್ಲಿ ಕಾಫಿ ಲೋಟ ಸಹ ತೊಳೆದಿದ್ರು ಎನ್ನಲಾಗ್ತಿದೆ.
ನಮ್ಮದು ಪ್ರಯತ್ನ ಮಾತ್ರ.. ಫಲಾ ಫಲ ಆ ದೇವರಿಗೆ ಬಿಟ್ಟಿದ್ದು, ಪ್ರಯತ್ನ ಇದ್ರೆ ಒಂದಲ್ಲಾ ಒಂದು ದಿನ ಸಕ್ಸಸ್ ಸಿಕ್ಕೇ ಸಿಗುತ್ತೆ. ಆ ಗೆಲುವು ಸಿಕ್ರೆ ಹಿಂದೆ ತಿರುಗಿ ನೋಡೋ ಮಾತೇ ಇಲ್ಲ. ಅದೇ ನಂಬಿಕೆ, ಆಶಾ ಭಾವನೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಎತ್ತಿನ ಬಂಡಿ ಕಟ್ಟಿದವರು ಕನ್ನಡದ ಸ್ಪೆಷಲ್ ಹುಡುಗ ಡಾಲಿ ಧನಂಜಯ್. ಅರಸೀಕೆರೆಯ ಕಲ್ಲೇನಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಡಾಲಿ ಧನಂಜಯ್ ಇಂದು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳ ಪಟ್ಟಿ ಸೇರಿದ್ದಾರೆ. ಈ ಡಾಲಿ ಬಣ್ಣದ ಜಗತ್ತಿಗೆ ಬಂದು 10 ವರ್ಷ ಆಗಿದೆ. ಸಿನಿಮಾ ಜರ್ನಿಯಲ್ಲಿ ಡಾಲಿ ದಶಕದ ಸಂಭ್ರಮದಲ್ಲಿದ್ದಾರೆ. ಧನಂಜಯ್ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಹುಡುಗ. 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದು ಅರಸೀಕೆರೆ ತಾಲೂಕಿಗೆ ಟಾಪರ್ ಆಗಿದ್ದವ್ರು. ಅಷ್ಟೆ ಅಲ್ಲ ಧನಜಯ್ ಗೆ ಇನ್ಫೋಸಿಸ್ನಲ್ಲಿ ಸಾಫ್ಟ್ವೇರ್ ಕೆಲಸ ಸಿಕ್ಕಿತ್ತು. ಆದ್ರೆ ನಾಟನಾ ಹುಚ್ಚು ಹಿಡಿಸಿಕೊಂಡಿದ್ದ ಧನಂಜಯ್ ಸೀದಾ ಸ್ಯಾಂಡಲ್‌ವುಡ್‌ಗೆ ಬಂದಿದ್ರು.
ಇದನ್ನೂ ವೀಕ್ಷಿಸಿ: ಬಡವರಿಗೆ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ತಪ್ಪಲ್ಲ:ಡಾಲಿ ಧನಂಜಯ್