ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮನಸ್ಸು ಗೆದ್ದ ಆ ಲವರ್ ಇವರೇ ನೋಡಿ..!

 ರಶ್ಮಿಕಾ ಮಂದಣ್ಣ, ಈ ಬ್ಯೂಟಿ ಮೇಲೆ ಅದೆಷ್ಟು ಜನರಿಗೆ ಕ್ರಶ್, ಲವ್ ಆಗಿದೆಯೋ ಗೊತ್ತಿಲ್ಲ. ಆದ್ರೆ ರಶ್ಮಿಕಾ ಇಷ್ಟು ದಿನ ಆ ಇಬ್ಬರನ್ನ ಮಾತ್ರ ಇಷ್ಟಪಟ್ಟಿದ್ರು. ಈಗ ಲಿಲ್ಲಿ ಮನಸ್ಸನ್ನ ಮತ್ತೊಬ್ರು ಗೆದ್ ಬಿಟ್ಟಿದ್ದಾರೆ. ರಶ್ಮಿಕಾಗೆ ಈಗ ಆ ಇಬ್ಬರನ್ನೂ ಒಟ್ಟೊಟ್ಟಿಗೆ ಪ್ರೀತಿಸಬೇಕಾದ ಕಾಲ. 
 
First Published Jul 15, 2022, 4:33 PM IST | Last Updated Jul 15, 2022, 5:37 PM IST

ರಶ್ಮಿಕಾ ಮಂದಣ್ಣ, ಈ ಬ್ಯೂಟಿ ಮೇಲೆ ಅದೆಷ್ಟು ಜನರಿಗೆ ಕ್ರಶ್, ಲವ್ ಆಗಿದೆಯೋ ಗೊತ್ತಿಲ್ಲ. ಆದ್ರೆ ರಶ್ಮಿಕಾ ಇಷ್ಟು ದಿನ ಆ ಇಬ್ಬರನ್ನ ಮಾತ್ರ ಇಷ್ಟಪಟ್ಟಿದ್ರು. ಈಗ ಲಿಲ್ಲಿ ಮನಸ್ಸನ್ನ ಮತ್ತೊಬ್ರು ಗೆದ್ ಬಿಟ್ಟಿದ್ದಾರೆ. ರಶ್ಮಿಕಾಗೆ ಈಗ ಆ ಇಬ್ಬರನ್ನೂ ಒಟ್ಟೊಟ್ಟಿಗೆ ಪ್ರೀತಿಸಬೇಕಾದ ಕಾಲ. 

ಶುರುವಾಗಲಿದೆ ಬಿಗ್ ಬಾಸ್ ಸೀಸನ್ 9, ಯಾರ್ಯಾರಿರಲಿದ್ದಾರೆ ಮನೆಯಲ್ಲಿ..?

ಅರೆ ರಶ್ಮಿಕಾಗೆ ಯಾಕಿಂತ ಸ್ಥಿತಿ ಬಂತು ಅಂದ್ಕೊಳ್ಳಬೇಡಿ. ರಶ್ಮಿಕಾ ಇಷ್ಟ ಪಡ್ತಿರೋದು ಔರ ಮತ್ತು ಸ್ನೋ ಅನ್ನೋರನ್ನ.  ಯಾರಿದು ಔರಾ ಮತ್ತು ಸ್ನೋ ಅಂತೀರಾ.. ಅದೇ ರಶ್ಮಿಕಾ ಮನೆಯಲ್ಲಿರೋ ನಾಯಿ ಮತ್ತು ಬೆಕ್ಕು. ರಶ್ಮಿಕಾ ಮಂದಣ್ಣ ಪ್ರಾಣಿಪ್ರಿಯೆ. ಕಳೆದ ವರ್ಷವಷ್ಟೆ ರಶ್ಮಿಕಾ ಕಾಕರ್ ಸ್ಪೆನಿಯಲ್ ಬ್ರಿಡ್ನ ನಾಯಿ ಖರೀದಿಸಿ ಅದಕ್ಕೆ ಔರ ಎಂದು ಹೆಸರಿಟ್ಟಿದ್ರು. ಇಷ್ಟು ದಿನ ಆ ಔರ ಜೊತೆ ಸಮಯ ಕಳೆಯುತ್ತಿದ್ದ ಲಿಲ್ಲಿಗೆ ಈಗ ಜೊತೆಗಾರನಾಗಿ ಬೆಕ್ಕು ಬಂದಿದ್ದು, ಅದಕ್ಕೆ ಸ್ನೋ ಅಂತ ಹೆಸರಿಟ್ಟಿದ್ದಾರೆ. ಔರ ಹಾಗು ಸ್ನೋ ಜೊತೆ ಇರೋ ವೀಡಿಯೋ ಶೇರ್ ಮಾಡಿರೋ ರಶ್ಮಿಕಾ, ಇನ್ನು ಮೂರು ವರ್ಷದಲ್ಲಿ ನನ್ನ ಮನೆ ಸಣ್ಣದೊಂದು ಕಾಡಾಗುತ್ತೆ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾರ ಈ ಪ್ರಾಣಿ ಪ್ರೀತಿಗೆ ಫಾಲೋವರ್ಸ್ ಸೆಲ್ಯೂಟ್ ಮಾಡ್ತಿದ್ದಾರೆ.