ಸೆಲೆಬ್ರಿಟಿ ರಾನ್ಯಾ ರಾವ್ ಜೈಲಿನಲ್ಲಿ ತೀವ್ರ ಹಿಂಸೆ: ಸಹಖೈದಿಗಳ ಕಾಟದಿಂದ ಖಿನ್ನತೆಗೆ ತುತ್ತಾದ ನಟಿ!

ನಟಿ ರಾನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ಸಂಬಂಧ ಬಂಧಿತರಾಗಿದ್ದು, ಇದೀಗ ಜೈಲಿನ ಸಹಖೈದಿಗಳ ಕಾಟದಿಂದ ತೀವ್ರ ಮನಃಸ್ತಾಪಕ್ಕೊಳಗಾಗಿದ್ದಾರೆ.

Share this Video
  • FB
  • Linkdin
  • Whatsapp

ನಟಿ ರಾನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ಸಂಬಂಧ ಬಂಧಿತರಾಗಿದ್ದು, ಇದೀಗ ಜೈಲಿನ ಸಹಖೈದಿಗಳ ಕಾಟದಿಂದ ತೀವ್ರ ಮನಃಸ್ತಾಪಕ್ಕೊಳಗಾಗಿದ್ದಾರೆ. ಸಹಖೈದಿಗಳು ರನ್ಯಾಳನ್ನು ಕೀಳಾಗಿ ಮಾತನಾಡಿ, ವ್ಯಂಗ್ಯವಾಡಿ ಅವಮಾನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಜೈಲು ಅಧಿಕಾರಿಗಳು ಸಹಖೈದಿಗಳನ್ನು ಬೇರೆ ಬ್ಯಾರಕ್‌ಗಳಿಗೆ ಸ್ಥಳಾಂತರಿಸಿದ್ದಾರೆ. ರನ್ಯಾ ಈಗ ಖಿನ್ನತೆಯಿಂದ ಪೀಡಿತರಾಗಿದ್ದು, ಪುಸ್ತಕಗಳಲ್ಲಿ ಮುದಗಿದ್ದಾರೆ. ಇದೇ ರೀತಿಯಾಗಿ, ಸೆಲೆಬ್ರಿಟಿಗಳಾದ ದರ್ಶನ್, ವಿಜಯ್, ರಾಗಿಣಿ, ಸಂಜನಾ, ಚೇತನ್, ಮರಿಯಾ ಸೂಸೈರಾಜ್ ಸೇರಿದಂತೆ ಹಲವರು ಜೈಲುವಾಸ ಅನುಭವಿಸಿ ಪರದಾಡಿದ ಉದಾಹರಣೆಗಳಿವೆ. ಐಷಾರಾಮಿ ಜೀವನದಿಂದ ತಕ್ಷಣ ಕಠಿಣ ಜೈಲುವಾಸಕ್ಕೆ ಬದಲಾವಣೆಯು ಇವರ ಮೇಲೆ ಭಾರೀ ಪರಿಣಾಮ ಬೀರಿದ್ದು, ಖಿನ್ನತೆಗೆ ಕಾರಣವಾಗಿದೆ. ಸೆರೆಮನೆಯಲ್ಲಿನ ಬಾಳು ಸೆಲೆಬ್ರಿಟಿಗಳಿಗೆ ನಿಜವಾಗಿಯೂ ಕಠಿಣ ಮತ್ತು ಸಂಕಷ್ಟಕರ.

Related Video