Uttarakanda Movie : ಉತ್ತರಕಾಂಡದಲ್ಲಿಲ್ಲ ರಮ್ಯಾ! ನಟಿ ಬದಲಿಗೆ ಯಾರಾಗ್ತಾರೆ ಗಬ್ರು ಸತ್ಯನ ಲವ್ವರ್..?

ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಡಾಲಿ ಜೋಡಿ ಅನ್ನೋದನ್ನ ಕೇಳಿಯೇ ಎಲ್ಲರೂ ಎಕ್ಸೈಟ್ ಆಗಿದ್ರು. ರಮ್ಯಾ ಈ ಸಿನಿಮಾಗಾಗಿ ತೂಕ ಕಡಿಮೆ ಮಾಡ್ಕೊಂಡು ಸಣ್ಣಾ ಆಗಿ ಶೂಟಿಂಗ್‌ಗೆ ತಯಾರಿ ನಡೆಸಿದ್ದರು. ಆದ್ರೆ ಇದೀಗ ರಮ್ಯಾ ಚಿತ್ರದಿಂದ ಹೊರಬಂದಿರುವುದು ಚಿತ್ರತಂಡಕ್ಕೂ ಬೇಸರ ತಂದಿದೆ.

Share this Video
  • FB
  • Linkdin
  • Whatsapp

'ಉತ್ತರಕಾಂಡ' ಚಿತ್ರದ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ರಾಜ್ಯದ ಮೂಲೆ ಮೂಲೆಯಲ್ಲಿ ಆಡಿಷನ್ ಮಾಡಿ ಸಹಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಬೆಂಗಳೂರು(Bengaluru) ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಕ್ಕಾಗಿ ಸೆಟ್‌ಗಳ ನಿರ್ಮಾಣವಾಗಿದೆ. ಇನ್ನು 10 ದಿನಗಳಲ್ಲಿ ಚಿತ್ರತಂಡ ಶೂಟಿಂಗ್(Shooting) ಆರಂಭಿಸಲು ಮುಂದಾಗಿದೆ. ಇಂತಹ ಹೊತ್ತಲ್ಲೇ ರಮ್ಯಾ ಚಿತ್ರದಿಂದ ಹೊರಬಂದಿರುವುದು ಚಿತ್ರತಂಡಕ್ಕೂ ಬೇಸರ ತಂದಿದೆ. ಈಗಾಗಲೇ ಸಣ್ಣ ಟೀಸರ್ ಬಿಟ್ಟು ಚಿತ್ರತಂಡ ನಿರೀಕ್ಷೆ ಹುಟ್ಟಾಕ್ಕಿದೆ. ಗಬ್ರು ಸತ್ಯ ಆಗಿ ಡಾಲಿ ಧನಂಜಯ್ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ರಮ್ಯಾ ಚಿತ್ರದಿಂದ ಔಟ್ ಆಗಿದ್ದು, ಇದೀಗ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ? ಎನ್ನುವ ಚರ್ಚೆ ಶುರುವಾಗಿದೆ. ಇಷ್ಟಕ್ಕೂ ರಮ್ಯಾ ಯಾಕೆ ಉತ್ತರಾಕಂಡ ಸಿನಿಮಾದಿಂದ(uttarakanda movie) ಹೊರಬಂದ್ರು..? ಅಂದರೆ ರಮ್ಯಾ(Ramya) ಹೇಳಿದ್ದು "ಡೇಟ್ಸ್ ಇಲ್ಲದ ಕಾರಣ ನಾನು 'ಉತ್ತರಕಾಂಡ' ಚಿತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಉತ್ತರಕಾಂಡ ಸಿನಿಮಾ ಹಾಗೂ ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ನಿಲ್ಲಿಸಿದ್ದೇನೆ ಚಿತ್ರತಂಡಕ್ಕೆ ಶುಭವಾಗಲಿ" ಎಂದು ಇತ್ತೀಚೆಗೆ ನಟಿ ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

ಇದನ್ನೂ ವೀಕ್ಷಿಸಿ: LK Advani: ಆದರ್ಶ ಬದುಕಿಗೆ ಕನ್ನಡಿಯಾದ ‘ಭಾರತ ರತ್ನ’: ಅಡ್ವಾಣಿಯವರ ರಾಜಕೀಯ ಬದುಕು ತುಂಬಾ ರೋಚಕ !

Related Video