LK Advani: ಆದರ್ಶ ಬದುಕಿಗೆ ಕನ್ನಡಿಯಾದ ‘ಭಾರತ ರತ್ನ’: ಅಡ್ವಾಣಿಯವರ ರಾಜಕೀಯ ಬದುಕು ತುಂಬಾ ರೋಚಕ !

ಶೂನ್ಯದಿಂದ ಬಿಜೆಪಿ ಕಟ್ಟಿದ ದಿಟ್ಟ ನಾಯಕ ಎಲ್ ಕೆ ಅಡ್ವಾಣಿ
ರಾಮ ಮಂದಿರ ಮರು ನಿರ್ಮಾಣ ಕಹಳೆ ಊದಿದ್ದು ಅಡ್ವಾಣಿ
“ಜೀವನದುದ್ದಕ್ಕೂ ನನ್ನ ಆದರ್ಶ & ತತ್ವಗಳಿಗೆ ಸಂದ ಗೌರವ”
ಅಡ್ವಾಣಿಯವರಿಗೆ ಕನ್ನಡ ನಾಡು-ನುಡಿ ಬಗ್ಗೆ ಅಪಾರ ಗೌರವ
 

Share this Video
  • FB
  • Linkdin
  • Whatsapp

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ(LK Advani) ಅವರಿಗೆ ‘ಭಾರತ ರತ್ನ’ ಪ್ರಶಸ್ತಿ(Bharat Ratna) ಪ್ರದಾನ ಮಾಡಲಾಯ್ತು. ದೇಶದಲ್ಲಿ ಬಿಜೆಪಿ(BJP) ಪಕ್ಷ ಕಟ್ಟಿ ಬೆಳೆಸುವುದರಲ್ಲಿ ಎಲ್ ಕೆ ಅಡ್ವಾಣಿಯವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಹಾಗೆನೇ ಜೀವನದುದ್ದಕ್ಕೂ ಆದರ್ಶ ಬದುಕು ಬದುಕಿದವರು ಎಲ್ ಕೆ ಅಡ್ವಾಣಿಯವರು. ಪ್ರಶಸ್ತಿಯನ್ನು ಎಲ್ ಕೆ ಅಡ್ವಾಣಿಯವರ ಮನೆಯಲ್ಲೇ ನೀಡಲಾಯ್ತು. ರಾಷ್ಟ್ರಪತಿ ದ್ರೌಪತಿ ಮುರ್ಮು(Droupadi Murmu) ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸಹ ಉಪಸ್ಥಿತರಿದ್ದರು.ರಾಮ ಮಂದಿ ನಿರ್ಮಾಣಕ್ಕೆ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಧೀಮಂತ. ಬಿಜೆಪಿ ಪಕ್ಷದ ಹಿರಿಯ ನಾಯಕ. ದೇಶದಲ್ಲಿ ಪಕ್ಷ ಅಷ್ಟೊಂದು ಚಾಲ್ತಿಯಲ್ಲಿ ಇಲ್ಲದೇ ಇದ್ದಾಗ, ಅಟಲ್ ಬಿಹಾರಿ ವಾಜಪೇಯಿ ಅವರೊಟ್ಟಿಗೆ ಜೋಡೆತ್ತಿನಂತೆ ನಿಂತು. ದೇಶಾಧ್ಯಂತ ಸುತ್ತಿ ಪಕ್ಷ ಕಟ್ಟಿದ್ದ ಎದೆಗಾರ ಶ್ರೀ ಲಾಲ ಕೃಷ್ಣ ಅಡ್ವಾಣಿಯವರು ಈಗ ಭಾರತಕ್ಕೆ ರತ್ನವಾಗಿದ್ದಾರೆ. ಭಾರತ ರತ್ನ ಪುರಸ್ಕಾರವು ಭಾರತೀಯ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗಳನ್ನು ತೋರಿದ ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತದೆ.

ಇದನ್ನೂ ವೀಕ್ಷಿಸಿ: Today Horoscope: 12 ರಾಶಿಗಳ ಭವಿಷ್ಯ ಹೇಗಿದೆ? ಈ ದಿನ ಶಿವಕುಮಾರ ಸ್ವಾಮಿಜೀ ಹುಟ್ಟಿದ ದಿನವಾಗಿದ್ದು, ಅವರ ಸ್ಮರಣೆ ಮಾಡಿ

Related Video