'ಕಾಂತಾರ'ದ ದಟ್ಟ ಕಾಡಿಗೆ ಎಂಟ್ರಿ ಕೊಟ್ಟ ರಾಮ್-ಲಕ್ಷ್ಮಣ್! ನಟ ರಿಷಬ್ ಶೆಟ್ಟಿಗೆ ಕಾಲಿವುಡ್ ಅಣ್ತಮ್ಮ ಆ್ಯಕ್ಷನ್ ಕಟ್ !
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ಚೆಲ್ ಕಥೆ ಹೊತ್ತು ಮತ್ತೆ ದೇಶ ಪರ್ಯಟನೆ ಮಾಡೋದಕ್ಕೆ ಸಜ್ಜಾಗಿರೋದು ನಿಮ್ಗೆ ಗೊತ್ತೇ ಇದೆ. ಹಾಗಂತ ಈ ಭಾರಿ ಬರೀ 16 ಕೋಟಿಯಲ್ಲಿ ಸಿನಿಮಾ ಮಾಡಿ ನಿಮ್ಮನ್ನ ರಂಜಿಸೋಕೆ ಬರಲ್ಲ. 120 ಕೋಟಿ ಬಂಡವಾಳ ಹಾಕಿ ಅದ್ಧೂರಿ ಮೇಕಿಂಗ್, ಅದ್ಧೂರಿ ತಾರಾಗಣದ ಜೊತೆ ಬರುತ್ತಿದ್ದಾರೆ ರಿಷಬ್.
ಕಾಂತಾರ ಡಿವೈನ್ ಸಿನಿಮಾ. ಆದ್ರೆ ಇಲ್ಲೂ ಅದ್ಧೂರಿ ಆಕ್ಷನ್ ಇತ್ತು. ಕಾಂತಾರ(Kantara) ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ್ರೆ ರಿಷಬ್ ಶೆಟ್ಟಿ (Rishab Shetty) ಹೀಗೂ ಆಕ್ಷನ್ ಮಾಡುತ್ತಾರಾ ಅಂತ ಸಿನಿ ಪ್ರೇಕ್ಷಕರು ಹುಬ್ಬೇರಿಸಿದ್ರು. ಅಷ್ಟೇ ಅಲ್ಲ ರಿಷಬ್ ಶೆಟ್ಟಿಯ ಫೈಟ್ ನೋಡಿ ಫುಲ್ ಮಾರ್ಕ್ಸ್ ಕೂಡ ಕೊಟ್ಟಿದ್ರು. ಈಗ ಕಾಂತಾರದ ಪ್ರೀಕ್ವೆಲ್ ಕಥೆ ಹೇಳೋಕೆ ಹೊರಟಿದ್ದಾರೆ ರಿಷಬ್ ಶೆಟ್ಟಿ. ಅಂದ್ರೆ ಇದು ಬನವಾಸಿಯ ಕದಂಬರ ಕಾಲಘಟ್ಟದ ದೈವಾರಾಧನೆ ಕಥೆಯನ್ನ ಕಟ್ಟಿಕೊಡುತ್ತಿದ್ದಾರೆ ರಿಷಬ್. ಹೀಗಾಗಿ ಆ ಕಾಲಘಟದ್ದ ಆಕ್ಷನ್ ದೃಷ್ಯಗಳು ಈ ಸಿನಿಮಾದಲ್ಲಿರಲಿವೆ. ಅದಕ್ಕಾಗಿ ಈಗ ಕಾಂತಾರದ ದಟ್ಟ ಕಾಡಿನೊಳಕ್ಕೆ ಕಾಲಿವುಡ್‌ನ (Kollywood) ಅಣ್ಣತ್ತ ಆಕ್ಷನ್ ಡೈರೆಕ್ಷನ್ ಮಾಡೊದ್ರಲ್ಲಿ ಪಂಟರ್ ಆಗಿರೋ ರಾಮ್ ಲಕ್ಷ್ಮಣ್(Ram Lakshman) ಎಂಟ್ರಿ ಕೊಟ್ಟಿದ್ದಾರಂತೆ. ರಾಮ್ ಲಕ್ಷ್ಮಣ ಕನ್ನಡಕ್ಕೆ ಹೊಸಬರೇನಲ್ಲ. ಪುನೀತ್ ರಾಜ್‌ಕುಮಾರ್‌ರ ಹಲವು ಸಿನಿಮಾಗಳಿಗೆ ಸ್ಟಂಟ್ ಡೈರೆಕ್ಷನ್ ಮಾಡಿದ್ದಾರೆ. ಮಾಸ್ ಹೀರೋ ಧ್ರುವ ಸರ್ಜಾರ ಎಲ್ಲಾ ಸಿನಿಮಾವದಲ್ಲಿ ರಾಮ್ ಲಕ್ಷ್ಮಣ್ ಕೈ ಚಳಕ ಇರುತ್ತೆ. ದರ್ಶನ್ ಮೂವಿಗಳಿಗೂ ರಾಮ್ ಲಕ್ಷ್ಮಣ್ ವರ್ಕ್ ಮಾಡಿದ್ದಾರೆ. ಯಶ್ ಆದಿಯಾಗಿ ಆಲ್ ಮೋಸ್ಟ್ ಕನ್ನಡದ ಬಿಗ್ ಸ್ಟಾರ್ಗಳಗೆ ಫೈಟ್ ಕಂಪೋಸ್ ಮಾಡಿರೋ ಕೀರ್ತಿ ಈ ಅಣ್ತಮ್ಮಂದಿರದ್ದು. ಈಗ ಕಾಂತಾರದ ಪ್ರೀಕ್ವೆಲ್ ಸ್ಟೋರಿಯಲ್ಲಿ ರಿಷಬ್ ಶೆಟ್ಟಿ ಜೊತೆ ಕೆಲಸಕ್ಕೆ ಇಳಿದಿದ್ದಾರೆ. 12 ದಿನಗಳ ಕಾಲ ಆಕ್ಷನ್ ದೃಶ್ಯದ ಚತ್ರೀಕರಣ ಕಡೆಯುತ್ತಂತೆ. ಅದಕ್ಕಾಗಿ ಕುಂದಾಪುರುದ ಕೆರಾಡಿಯಲ್ಲಿ ಸ್ಟಂಟ್ ಚಿತ್ರೀಕರಣಕ್ಕೆ ಅಖಾಡ ರೆಡಿಯಾಗಿದೆ.
ಇದನ್ನೂ ವೀಕ್ಷಿಸಿ: 'ಟಾಕ್ಸಿಕ್' ಶೂಟಿಂಗ್ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಶೂಟಿಂಗ್ ಅಖಾಡಕ್ಕೆ ಇಳಿದ ಗೀತು ಮೋಹನ್ ದಾಸ್!