Asianet Suvarna News Asianet Suvarna News

ಸಿದ್ಧವಾಗುತ್ತಾ ಕನ್ನಡದ 'RRR' ಸಿನಿಮಾ..? ಕನ್ನಡದಲ್ಲಿ 'RRR' ಸುಳಿವು ಕೊಟ್ಟ ರಕ್ಷಿತ್ ಶೆಟ್ಟಿ..!

ಕನ್ನಡದಲ್ಲಿ 'RRR' ಸುಳಿವು ಕೊಟ್ಟ ರಕ್ಷಿತ್ ಶೆಟ್ಟಿ..!
RRR ಅಂದ್ರೆ ರಕ್ಷಿತ್, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ
'ಮಿಡ್ನೈಟ್ ಆಫ್ ಮೋಕ್ಷ'ದಲ್ಲಿ ಜಿಗರಿ ದೋಸ್ತ್‌ಗಳು

ತ್ರಿಬಲ್ ಆರ್ ಅಂದ್ರೆ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಅಂತ ಅರ್ಥ. ಈ ತ್ರಿಬಲ್ ಸ್ಟಾರ್ಸ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಈ ಮೂರು ಜನ ಫ್ಯಾನ್ಸ್‌ಗಿರೋ ದೊಡ್ಡ ಆಸೆ. ಕನ್ನಡದಲ್ಲಿ ಆರ್‌ಆರ್‌ಆರ್‌ ಸಿನಿಮಾ ಯಾವಾಗ ಮಾಡ್ತೀರಾ ಅನ್ನೋ ಪ್ರಶ್ನೆ ಈ ಮೂರು ಜನ ಸ್ಟಾರ್ಸ್‌ಗೆ ಹತ್ತಾರು ಭಾರಿ ಎದುರಾಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನ ತೆಲುಗುಗೆ ಡಬ್ ಮಾಡಿದ್ದಾರೆ. ಈ ಸಿನಿಮಾ ಪ್ರಮೋಷನ್ಗೆ ಹೈದ್ರಬಾದ್, ಆಂಧ್ರ ತುಂಬಾ ಓಡಾಡ್ತಿರೋ ರಕ್ಷಿತ್ ಶೆಟ್ಟಿ(Rakshit Shetty) ತನ್ನ ಸ್ನೇಹಿತ ರಿಷಬ್ ಹಾಗು ರಾಜ್ ಬಿ ಶೆಟ್ಟಿ ಜೊಗೆಗಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಗೋಲ್ಡನ್ ಗ್ಯಾಂಗ್ ರಕ್ಷಿತ್, ರಿಷಬ್, ರಾಜ್ ಬಿ ಶೆಟ್ಟಿ. ಈ ಗೋಲ್ಡನ್ ಗ್ಯಾಂಗ್ ಒಟ್ಟಿಗೆ ನಟಿಸೋ ಸಿನಿಮಾ ಯಾವ್ದು ಗೊತ್ತಾ..? ಅದುವೇ 'ಮಿಡ್ನೈಟ್ ಆಫ್ ಮೋಕ್ಷ'(Midnight of Moksha) ಈ ಸಿನಿಮಾದಲ್ಲಿ ನಾನು, ರಿಷಬ್ ಶೆಟ್ಟಿ(Rishabh Shetty) ಹಾಗೂ ರಾಜ್. ಬಿ ಶೆಟ್ಟಿ (Rob B Shetty) ಕೆಲಸ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ ರಕ್ಷಿತ್. ರಕ್ಷಿತ್ ಶೆಟ್ಟಿ, ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ 2 ಬಂದ ಬಳಿಕ ರಿಚರ್ಡ್ ಆಂಟನಿ, ಪುಣ್ಯಕೋಟಿ ಭಾಗ 1 ಮತ್ತು ಭಾಗ ಎರಡು, ಸಿನಿಮಾ ಮಾಡ್ತಾರೆ. ಆ ಬಳಿಕ 'ಮಿಡ್ನೈಟ್ ಆಫ್ ಮೋಕ್ಷ' ಸಿನಿಮಾ ಶುರುವಾಗುತ್ತಂತೆ. ಅಷ್ಟರಲ್ಲೇ ಕಾಂತಾರ 2 ಹಾಗೂ ಹಿಂದಿಯಲ್ಲಿ ಒಂದ್ ಸಿನಿಮಾ ಮಾಡಿ ಬರ್ತಾರಂತೆ ರಿಷಬ್ ಶೆಟ್ಟಿ. ಈ ಕಡೆ ರಾಜ್ ಬಿ ಶೆಟ್ಟಿ Midnight OF Moksha ಸಿನಿಮಾ ಕೆಲಸ ಮಾಡುತ್ತಾರಂತೆ.. ಹೀಗಾಗಿ ಈ ಗೋಲ್ಡನ್ ಗ್ಯಾಂಗ್ ಒಟ್ಟಿಗೆ ನಟಿಸೋ ಸಿನಿಮಾ ಮಿಡ್ನೈಟ್ ಆಫ್ ಮೋಕ್ಷಾ ಅನ್ನೋ ಸಣ್ಣ ಸುಳಿವು ಸಿಕ್ಕಿದೆ. ಆದ್ರೆ ಅದು ಯಾವಾಗ  ಶುರುವಾಗುತ್ತೆ ಅನ್ನೋದೆ ಈಗ ಕುತೂಹಲ.

ಇದನ್ನೂ ವೀಕ್ಷಿಸಿ:  ಪಿಎಂಗೆ ಬರೆದಿರುವ ದೊಡ್ಡ ಗೌಡರ ಪತ್ರದಲ್ಲೇನಿದೆ..? ಬಂದ್ ವಿಚಾರದಲ್ಲಿ ಎರಡು ಬಣಗಳ ವಾದ ವಿವಾದ ಏನು ?

Video Top Stories