ಯುಪಿ ಸಿಎಂ ಕಾಲಿಗೆ ಬಿದ್ದ ಸೂಪರ್ ಸ್ಟಾರ್..! ಸ್ವಾಭಿಮಾನವನ್ನು ಯೋಗಿ ಕಾಲಡಿ ಇಟ್ರಾ ತಲೈವಾ ?
ಉತ್ತರ ಪ್ರದೇಶ ಸಿಎಂ ಭೇಟಿ ಮಾಡಿದ ರಜನಿಕಾಂತ್
ಟ್ರೋಲರ್ಸ್‌ಗೆ ಆಹಾರವಾದ ಸೂಪರ್ ಸ್ಟಾರ್..!
ರಜನಿಗಿಂತ 21 ವರ್ಷ ಚಿಕ್ಕವರು ಸಿಎಂ ಯೋಗಿ..!
ಸೂಪರ್ ಸ್ಟಾರ್ ರಜನಿಕಾಂತ್ ವಿಶ್ವದಾದ್ಯಂತ ಇರೋ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ. ತಲೈವಾರನ್ನ ಎದೆಯಲ್ಲಿಟ್ಟುಕೊಂಡು ಆರಾಧಿಸೋ ದೊಡ್ಡ ಅಭಿಮಾನಿ ಬಳಗ ಇದೆ. ಆದ್ರೆ ಕೆಲ ಡೈ ಹಾರ್ಡ್ ಪ್ಯಾನ್ಸ್ ಸೂಪರ್ ಸ್ಟಾರ್ ಮೇಲೆ ಈಗ ಸ್ವಲ್ಪ ಬೇಸರಗೊಂಡಿದ್ದಾರೆ. ಯಾಕ್ ಗೊತ್ತಾ ತಲೈವಾ ರಜನಿಕಾಂತ್(Rajinikanth) ಇತ್ತೀಚೆಗೆ ಯೋಗಿ ಆದಿತ್ಯಾನಾಥ್(Yogi Adityanath) ರನ್ನ ಭೇಟಿ ಮಾಡಿದ್ದು, ಈ ಭೇಟಿ ವೇಳೆ ರಜನಿಕಾಂತ್ ಆದಿತ್ಯಾನಾಥ್ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ರನಿಕಾಂತ್ ಈ ರೀತಿ ಮಾಡುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಯಾಕಂದ್ರೆ ರಜನಿಕಾಂತ್‌ಗಿಂತ ಯುಪಿ ಸಿಎಂ ಯೋಗಿ ಆದಿತ್ಯನಾತ್ ವಯಸ್ಸಿನಲ್ಲಿ 21 ವರ್ಷ ಚಿಕ್ಕವರು. ಹೀಗಾಗಿ ರಜನಿಕಾಂತ್ ತನ್ನ ವಯಸ್ಸಿಗಿಂತ ಚಿಕ್ಕ ವ್ಯಕ್ತಿ ಕಾಲಿಗೆ ಬಿದ್ದುದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಸ್ವಾಭಿಮಾನವನ್ನು ಯೋಗಿ ಕಾಲಡಿ ಇಟ್ರಾ ತಲೈವಾ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ನಿತಿನ್ ಸಿನಿಮಾದಿಂದ ಕೊಡಗಿನ ಬೆಡಗಿ ಕಿಕ್ ಔಟ್: ರಶ್ಮಿಕಾ ಜಾಗಕ್ಕೆ ಕಿಸ್ ಬ್ಯೂಟಿ ಶ್ರೀಲೀಲಾ ಎಂಟ್ರಿ..!