ಚಿರು ಪಾತ್ರಕ್ಕೆ ಜೀವ ತುಂಬಿದ ಧ್ರುವ ಸರ್ಜಾ: ತಮ್ಮನ ಹುಟ್ಟುಹಬ್ಬಕ್ಕೆ ಅಣ್ಣನ ಕೊನೆಯ ಗಿಫ್ಟ್‌‌..!

5 ದಿನ ಡಬ್ಬಿಂಗ್, ಧ್ರುವ ಸರ್ಜಾ ಎಮೋಷನಲ್..!
ಅಣ್ಣನಿಗಾಗಿ ಸ್ಟುಡಿಯೋದಲ್ಲಿ ಬಿಕ್ಕಿ ಅತ್ತಿದ್ದ ಧ್ರುವ..!
ಚಿರು ಪಾತ್ರದ ಡಬ್ಬಿಂಗ್‌ಗೆ ಹಿಡಿದ್ದು ಬರೋಬ್ಬರಿ 15 ದಿನ
 

First Published Aug 21, 2023, 9:13 AM IST | Last Updated Aug 21, 2023, 9:13 AM IST

ಸ್ಯಾಂಡಲ್‌‌ವುಡ್‌ ಯುವಸಾಮ್ರಾಟ್‌ ಚಿರು ಸರ್ಜಾ ಅಗಲಿ 3 ವರ್ಷ ಆಗಿದೆ. ಇಂಡಸ್ಟ್ರೀಯಲ್ಲಿ ಒಳ್ಳೆ ಹೆಸರು ಸಂಪಾದಿಸಿದ್ದ ಚಿರು ಸರ್ಜಾ ಹೋಗುವ ಮೊದಲು ಅದೊಂದು ಚಿತ್ರದಲ್ಲಿ ನಟಿಸಿದ್ರು. ಕಳೆದ ಮೂರು ವರ್ಷಗಳಿಂದ, ಆ ಸಿನಿಮಾಗಾಗಿ ಸಿನಿರಸಿಕರು ಕಾದು ಕಾದು ಸುಸ್ತಾಗಿದ್ರು. ಕೊನೆಗೂ ಆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆ ಚಿತ್ರವೇ ರಾಜಮಾರ್ತಾಂಡ(Rajamartanda). ಚಿರು ಅಗಲಿಕೆ ಬಳಿಕ ರಾಜಮಾರ್ತಾಂಡ ಸಿನಿಮಾ ಬಗ್ಗೆ ಸೆಂಟಿಮೆಂಟ್‌ ಕ್ರಿಯೇಟ್‌ ಆಗಿತ್ತು. ಚಿರು ಫ್ಯಾಮಿಲಿಯವ್ರಿಗೂ ಈ ಸಿನಿಮಾ ಅದೇನೋ ಒಂದು ಎಮೋಷನಲ್. ಅದ್ರಲ್ಲೂ ಅಣ್ಣನ ಕೊನೇ ಸಿನಿಮಾ ಸೆಲೆಬ್ರೇಟ್‌ ಮಾಡ್ಬೇಕು, ದೊಡ್ಡದಾಗಿ ತೆರೆಗೆ ತರ್ಬೇಕು ಅಂತ ಧ್ರುವ ಸರ್ಜಾ(Dhruva Sarja) ಕನಸು ಕಂಡಿದ್ದಾರೆ. ಆ ಕನಸು ಈಗ ಈಡೇರೋ ಟೈಂ ಬಂದಿದೆ. ಅಣ್ಣ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿಯ ಜೀವ ತುಂಬಿದ್ದಾರೆ. ಅಣ್ಣನ ಸಿನಿಮಾಗೆ ಆಕ್ಷನ್ ಪ್ರಿನ್ಸ್‌ ಆತ್ಮವಾಗಿದ್ದಾರೆ. ರಾಜಮಾರ್ತಾಂಡ ಸಿನಿಮಾದಲ್ಲಿ ಚಿರು ದೇಹವಾದ್ರೆ, ಧ್ರುವ ಸರ್ಜಾ ಆತ್ಮ. ಚಿರು(Chiranjeevi Sarja) ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡೋ ಮೊದಲೇ, ಇಹಲೋಕದಿಂದ ಕಣ್ಮರೆಯಾದ್ರು. ಹೀಗಾಗಿ ಧ್ರುವ ಸರ್ಜಾ ತನ್ನ ಅಣ್ಣ ಚಿರು ಸರ್ಜಾ ರಾಜಮಾರ್ತಾಂಡ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಮೂರು ವರ್ಷದಿಂದ ಬಿಡುಗಡೆಗಾಗಿ ಕಾಯ್ತಿದ್ದ ರಾಜಮಾರ್ತಾಂಡ ವನವಾಸ ಕೊನೆ ಆಗಿದೆ. ಆದ್ರೆ ಚಿರು ಪಾತ್ರಕ್ಕೆ ಡಬ್ಬಿಂಗ್ ಮಾಡೋದು ಧ್ರುವಗೆ ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ತನ್ನ ಅಣ್ಣ ಚಿರು ಡಬ್ಬಿಂಗ್ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ ಧ್ರುವ ಸರ್ಜಾ. ಹೀಗಾಗಿ ಈ ಡಬ್ಬಿಂಗ್ ಕೆಲಸ ಮಾಡೋಕೆ ಬರೋಬ್ಬರಿ 15 ದಿನ ಸಮಯ ತೆಗೆದುಕೊಂಡಿದ್ರಂತೆ ಧ್ರುವ ಸರ್ಜಾ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ನಾಗರ ಪಂಚಮಿ ಇದ್ದು, ಈ ರೀತಿಯಾಗಿ ನಾಗ ದೇವರ ಆರಾಧನೆ ಮಾಡಿ..