Today Horoscope: ಇಂದು ನಾಗರ ಪಂಚಮಿ ಇದ್ದು, ಈ ರೀತಿಯಾಗಿ ನಾಗ ದೇವರ ಆರಾಧನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಸೋಮವಾರ, ಪಂಚಮಿ ತಿಥಿ, ಚಿತ್ರಾ ನಕ್ಷತ್ರ.

ಈ ದಿನ ನಾಗರ ಪಂಚಮಿ ಇದ್ದು, ಇದನ್ನು ನಾಡಿನೆಲ್ಲೆಡೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯಾವುದೇ ವಿಷ ಜಂತುಗಳಿಂದ ತೊಂದರೆಯಾಗಬಾರದೆಂದು ಹಾಗೂ ಚರ್ಮ ರೋಗ ಪರಿಹಾರಕ್ಕೆ ನಾಗದೇವತೆ ಆರಾಧನೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸಂತಾನ ಭಾಗ್ಯಬೇಕಾದವರೂ ನಾಗ ದೇವರ ಆರಾಧನೆ ಮಾಡಬಹುದು. ನಾಗರ ಕಲ್ಲು ಅಥವಾ ಹುತ್ತಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ನಾಗ ದೇವರನ್ನು ಪೂಜಿಸಬಹುದು. ನಾಗ ದೇವರಿಗೆ ಪ್ರಿಯವಾದದ್ದು, ತಾಳೆ, ಜಾಜಿ, ಕರವೀರ ಪುಷ್ಪವಾಗಿದೆ. ಇದರಿಂದ ನಾಗ ದೇವರನ್ನು ಪೂಜಿಸಿ. 

ಇದನ್ನೂ ವೀಕ್ಷಿಸಿ:  ದೇವರಾಜು ಅರಸು ಕಾರ್ಯಕ್ರಮ: ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ವಾಗ್ದಾಳಿ

Related Video