ದುನಿಯಾ ವಿಜಯ್ ಜೊತೆ 'ಟೋಬಿ'ರಾಜ್ ಬಿ ಶೆಟ್ಟಿ: ಚೋಮನದುಡಿ ಸ್ಪೂರ್ತಿಯಲ್ಲಿ ಬರುತ್ತಾ ಈ ಜೋಡಿ ಸಿನಿಮಾ ?

ಇದೇ ಮೊದಲ ಬಾರಿಗೆ  ಟೋಬಿ ಖ್ಯಾತಿಯ ರಾಜ್ ಬಿ ಶೆಟ್ಟಿ, ಸಲಗ ದುನಿಯಾ ವಿಜಯ್ ಜೊತೆ ಸೇರಿ ಒಂದು ಚಿತ್ರದಲ್ಲಿ ನಟಿಸೋಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.

Share this Video
  • FB
  • Linkdin
  • Whatsapp

ದುನಿಯಾ ವಿಜಯ್ 29ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಆ ಸಿನಿಮಾದಲ್ಲಿ ರಚಿತಾ ರಾಮ್(Rachita Ram) ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ(Raj B Shetty) ನಟಿಸಲಿದ್ದಾರೆ ಎನ್ನಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರು ಬರೆದಿರುವ 'ಚೋಮನ ದುಡಿ' ಕಾದಂಬರಿ ಪ್ರೇರಿತ ಸಿನಿಮಾ ಎನ್ನಲಾಗಿದೆ. ಜಡೇಶ ಹಂಪಿ(Jadesh Hampi) ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಕಾಟೇರ' ಸಿನಿಮಾಗೆ ಕತೆ ಬರೆದಿದ್ದು ಇದೇ ಜಡೇಶ್ ಹಂಪಿ. ಹಾಗೇ ಶರಣ್ ನಟನೆಯ 'ಗುರು ಶಿಷ್ಯರು' ಸಿನಿಮಾದ ಡೈರೆಕ್ಷರ್ ಆಗಿರುವ ಇವರು ಈಗ 'ಚೋಮನ ದುಡಿ'ಯಿಂದ ಸ್ಪೂರ್ತಿ ಪಡೆದು ಹೆಣೆದ ಕಥೆಯನ್ನು ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಕಥೆಗೆ ಹೆಚ್ಚಿನ ಮಹತ್ವ ಕೊಡುವ ಈ ನಿರ್ದೇಶಕ 'ಚೋಮನ ದುಡಿ'ಯಿಂದ ಪ್ರೇರಿತರಾಗಿ ಎಂತಹ ಕಥೆಯನ್ನು ತೆರೆಮೇಲೆ ತರಬಹುದು? ಅನ್ನುವ ಕುತೂಹಲವಿದೆ. ಸದ್ಯ ದುನಿಯಾ ವಿಜಯ್(Duniya Vijay)ಭೀಮ ಸಿನಿಮಾ ರಿಲೀಸ್ ಮಾಡೊ ಬಿಜಿಯಲ್ಲಿದ್ದಾರೆ. ಇದಾದನಂತರ ಮಗಳ ಈ ಸಿನಿಮಾ ಶುರುವಾಗಲಿದ್ದು ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆನ್ನಲಾಗಿದೆ. ಯಾವುದಕ್ಕೂ ಅಧಿಕೃತ ಅನೌನ್ಸ್‌ಮೆಂಟ್‌ಗಾಗಿ ಕಾಯುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Ramya - Rashmika: ರಮ್ಯಾ, ರಶ್ಮಿಕಾ ಮಂದಣ್ಣ ವೋಟ್ ಹಾಕಿಲ್ವಂತೆ: ಮತದಾನ ಮಾಡದೇ ಇರೋದಕ್ಕೆ ಕಾರಣ ಏನು..?

Related Video