'ಅಘೋರಿ'ಯಾಗಿ ಬಂದ ರಾಧಿಕಾ: 'ಭೈರಾದೇವಿ' ಲುಕ್'ಗೆ ಫ್ಯಾನ್ಸ್ ಫಿದಾ

ರಾಧಿಕಾ ಕುಮಾರಸ್ವಾಮಿ ಅಭಿನಯದ 'ಭೈರಾದೇವಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

Share this Video
  • FB
  • Linkdin
  • Whatsapp

ಶ್ರೀಜೈ ನಿರ್ದೇಶಿಸುತ್ತಿರುವ ಭೈರಾದೇವಿ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಹೋಮ್ ಬ್ಯಾನರ್ ಶಮಿಕಾ ಎಂಟರ್ ಪ್ರೈಸಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದಲ್ಲಿ ರಾಧಿಕಾ ಕಾಳಿ ಮತ್ತು ಅಘೋರಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭೈರಾದೇವಿಯ ಮತ್ತೊಂದು ಹೆಸರು ಕಾಳಿ, ಹಾಗಾಗಿ ಕಾಳಿ ಅವತಾರದಲ್ಲೂ ರಾಧಿಕಾ ಕಾಣಿಸಿಕೊಂಡಿದ್ದಾರೆ. ರಾಧಿಕಾ ಇದೇ ಮೊದಲ ಬಾರಿಗೆ ಅಘೋರಿ ಪಾತ್ರ ಮಾಡಿದ್ದು, ಸ್ಮಶಾನದಲ್ಲೆಲ್ಲಾ ಓಡಾಡಿ ಕುಣಿದಾಡಿದ್ದರು. ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಡಾನ್ಸ್ ಮಾಡುವಾಗ ಬಿದ್ದಿದ್ದರು ಕೂಡ. ಈ ಪಾತ್ರಕ್ಕಾಗಿ ಸುಮಾರು 5 ಗಂಟೆ ಸಮಯ ರಾಘವೇಂದ್ರ ಮತ್ತು ನಾಗೇಂದ್ರ ಮೇಕಪ್ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಘೋರಿ ಅವತಾರದಲ್ಲಿ ನಿಜಕ್ಕೂ ಬೆಚ್ಚಿ ಬೀಳುವಂತೆ ಕಾಣುತ್ತಾರೆ. ಇತ್ತೀಚೆಗಷ್ಟೇ ಶಿವರಾತ್ರಿಯಂದು ಈ ಸಿನಿಮಾದ ಒಂದು ಸಣ್ಣ ಝಲಕ್ ರಿಲೀಸ್ ಆಗಿದ್ದು ಇಂಡಸ್ಟ್ರಿಯಲ್ಲಿ ಈ ಚಿತ್ರದ ಬಗ್ಗೆ ಹೊಸ ಟಾಕ್ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video