ಗೋ ಪ್ರೇಮ ಮೆರೆದ ರಕ್ಷಿತ್ ಶೆಟ್ಟಿ: ವಿಡಿಯೋ ವೈರಲ್

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗೋವುಗಳ ಪ್ರೀತಿಯಲ್ಲಿ ಮುಳುಗಿದ್ದು, ಅವರು ಗೋವನ್ನು ಮುದ್ದಾಡೋ ಲವ್ಲಿ ವಿಡಿಯೋ ವೈರಲ್ ಆಗಿದೆ...

First Published Feb 23, 2023, 3:10 PM IST | Last Updated Feb 23, 2023, 3:10 PM IST

ಉಡುಪಿಯ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ನಡೆಯುತ್ತಿದೆ. 4 ಕೋಟಿ ವೆಚ್ಚದಲ್ಲಿ ನಡೆಯುವ ಈ ಯಾಗಕ್ಕಾಗಿ ಸಿದ್ಧತೆ ಆಗ್ತಿದೆ. ಈ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಅಷ್ಟೆ ಅಲ್ಲ ಅದೇ ದೇವಸ್ಥಾನದಲ್ಲಿರೋ ಪುಂಗನೂರು ತಳಿಯ ಗೋವುಗಳನ್ನು ರಕ್ಷಿತ್ ಪ್ರೀತಿಯಿಂದ ಮುದ್ದಾಡಿ ಗೋ ಪ್ರೇಮ ಮೆರೆದಿದ್ದಾರೆ. ಪುಂಗನೂರು ತಳಿಯ ಈ ಗೋವುಗಳನ್ನು ನೋಡೋದಕ್ಕೆ ತುಂಬಾ ಖುಷಿ ಆಗುತ್ತೆ. ತಿರುಪತಿ ತಿಮ್ಮಪ್ಪನಿಗೆ ಹಾಲಾಭಿಷೇಕಕ್ಕೆ ಇದೇ ತಳಿಯ ಗೋವಿನ ಹಾಲು ಬಳಸುತ್ತಾರಂತೆ. ಅದೇ ತಳಿಯ ಹಸುಗಳನ್ನೇ ರಕ್ಷಿತ್ ಪ್ರೀತಿಯಿಂದ ಮಾತನಾಡಿಸಿದ್ದಾರೆ.

ಕಾಂತಾರ-2 ಸಿನಿಮಾದಲ್ಲಿ ರಜನಿಕಾಂತ್?: ರಿಷಬ್ ಶೆಟ್ಟಿ ಏನಂದ್ರು?