ಪುರಟ್ಚಿ ತಲೈವಿ ಸಮಾಧಿಗೆ ಹೋಗಿದ್ದೇಕೆ ರಚಿತಾ ರಾಮ್?: 'ಐರನ್ ಲೇಡಿ'ಬಯೋಪಿಕ್ ಮಾಡ್ತಾರಾ ನಟಿ ?
ತಮಿಳು ನೆಲದಲ್ಲಿ ಸಿಂಪಲ್ಲಾಗಿ ಕಾಣಿಸಿದ ಡಿಂಪಲ್ ಕ್ವೀನ್!
ಐರನ್ ಲೇಡಿ ಸಮಾಧಿಗೆ ಭೇಟಿ ಕೊಟ್ಟ ರಚಿತಾ ರಾಮ್..!
ರಾಜಕೀಯದ ಕನಸು ಕಾಣ್ತಿದ್ದಾರಾ ಡಿಂಪಲ್ ಕ್ವೀನ್.?
ಸ್ಯಾಂಡಲ್‌ವುಡ್‌ನ ನಯಾ ಪದ್ಮಾವತಿ ರಚಿತಾ ರಾಮ್‌ಗೆ ಒಂದು ಆಸೆ ಇದೆ. ಕನ್ನಡದ ಟಾಪ್ ಹೀರೋಯಿನ್ ಆರತಿ, ಕಲ್ಪನಾ ಅಥವಾ ಜಯಂತಿ ಅವರ ಬಯೋಪಿಕ್ ಸಿನಿಮಾ ಮಾಡಬೇಕು ಅನ್ನೋದು. ಇದನ್ನ ಹಲವು ಭಾರಿ ಆಪ್ತರ ಬಳಿ ಹೇಳಿಕೊಂಡಿದ್ದು ಇದೆ. ಅಷ್ಟೇ ಅಲ್ಲ ತಮಿಳು ನಟಿ ಜಯಲಲಿತಾರನ್ನ ಆರಾಧಿಸೋ ರಚಿತಾ ರಾಮ್ ಈಗ ಅವರ ಸಮಾಧಿಗೆ ಭೇಟಿ ಕೊಟ್ಟಿದ್ದು, ಹಲವು ಕುತೂಹಲಗಳನ್ನ ಹುಟ್ಟಿಸಿದೆ. ಕೆಲವ್ರು ರಚಿತಾ ರಾಮ್ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ಮಾಡ್ತಾರೆ ಅದಕ್ಕೆ ಅಮ್ಮನ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದಾರೆ ಅನ್ನುತ್ತಿದ್ದಾರೆ. ಇನ್ ಕೆಲವರು ಇಲ್ಲ ಇಲ್ಲ ರಚಿತಾ ರಾಜಕೀಯಕ್ಕೆ ಬರ್ತಾರೆ ಅದಕ್ಕೆ ಜಯಲಲಿತಾ ಸಮಾಧಿಗೆ ಹೋಗಿದ್ದಾರೆ ಅಂತ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ನಿಜ ಏನ್ ಗೊತ್ತಾ.? ರಚಿತಾ ರಾಮ್ ಸಿನಿಮಾ ಒಂದರ ಶೂಟಿಂಗ್ಗೆ ತಮಿಳು ನಾಡಿನಲ್ಲಿದ್ದಾರಂತೆ. ಆ ಚಿತ್ರದ ಶೂಟಿಂಗ್ ಬಿಡುವಿನ ವೇಳೆ ಜಯಲಲಿತಾ ಸಮಾಧಿಗೆ ಭೇಟಿ ಕೊಟ್ಟು ಬಂದಿದ್ದಾರೆ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಜಯಲಲಿತಾ ಸಮಾಧಿಗೆ ರಚಿತಾ ಹೋಗಿದ್ದು ಈಗ ಸ್ಯಾಂಡಲ್ವುಡ್ನ ಹಾಟ್ ಟಾಪಿಕ್ ಆಗಿದೆ.
ಇದನ್ನೂ ವೀಕ್ಷಿಸಿ: ಕಿಚ್ಚನ 46ನೇ ಸಿನಿಮಾ ಬಗ್ಗೆ ಹೊರ ಬಂತು ಸರ್ಪ್ರೈಸ್ ಸುದ್ದಿ : ಚಿತ್ರದ ಮೇಲೆ ಹೆಚ್ಚಾಯ್ತು ಕುತೂಹಲ!