ಕಿಚ್ಚನ 46ನೇ ಸಿನಿಮಾ ಬಗ್ಗೆ ಹೊರ ಬಂತು ಸರ್ಪ್ರೈಸ್ ಸುದ್ದಿ : ಚಿತ್ರದ ಮೇಲೆ ಹೆಚ್ಚಾಯ್ತು ಕುತೂಹಲ!

ವೀಕೆಂಡ್ನಲ್ಲಿ ಸರ್ಪ್ರೈಸ್ ಸುದ್ದಿ ಕೊಟ್ಟ ಸುದೀಪ್..!
ಕಿಚ್ಚನ 46ನೇ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್!
ಜೂನ್ 27ಕ್ಕೆ K46 ಟೀಸರ್ ರಿಲೀಸ್ ಡೇಟ್ ಅನೌನ್ಸ್!
 

First Published Jun 25, 2023, 12:31 PM IST | Last Updated Jun 25, 2023, 12:32 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಫುಲ್ ಬ್ಯುಸಿಯಾಗಿದ್ದಾರೆ. ಹಾಗಂತ ಕಿಚ್ಚ ಕ್ರಿಕೆಟ್ನಲ್ಲಿ ಬ್ಯುಸಿ ಆಗಿಲ್ಲ. ಅದನ್ನೆಲ್ಲಾ ಮುಗಿಸಿ ಸಿನಿಮಾ ಕೃಷಿಗೆ ಬಂದಿದ್ದಾರೆ ಕಿಚ್ಚ. ಸುದೀಪ್ 46ನೇ ಸಿನಿಮಾ ಅನೌನ್ಸ್ ಆಗಿದೆ. ತಮಿಳಿನ ವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದಾರೆ ಹೆಬ್ಬುಲಿ. ಆದ್ರೆ ಆ ಸಿನಿಮಾ ಬಗ್ಗೆ ಮತ್ತಿನ್ಯಾವ ಅಪ್ಡೇಟ್ ಕೂಡ ಸಿಕ್ಕಿರಲಿಲ್ಲ. ಈಗ ಈ ವೀಕೆಂಡ್ನಲ್ಲಿ ಕಿಚ್ಚ ಸರ್ಪ್ರೈಸ್ ಸುದ್ದಿಯೊಂದನ್ನ ಶೇರ್ ಮಾಡಿದ್ದಾರೆ. ಕಿಚ್ಚನ 46ನೇ ಸಿನಿಮಾವನ್ನ ವಿ ಕ್ರಿಯೇಷನ್ಸ್ ನಲ್ಲಿ ನಿರ್ಮಾಪಕ ಕಲೈಪುಲಿ ಎಸ್. ಧಾನು ನಿರ್ಮಾಣ ಮಾಡುತ್ತಿದ್ದಾರೆ. ಕಬಾಲಿ, ಅಸುರನ್, ತುಪಾಕಿಯಂತಹ ಹಿಟ್ ಸಿನಿಮಾ ನಿರ್ಮಿಸಿರೋ ಖ್ಯಾತಿ ವಿ ಕ್ರಿಯೇಷನ್ಸ್ ಸಂಸ್ಥೆಗಿದೆ. ಇದಿಷ್ಟು ಬಿಟ್ಟರೆ ಸುದೀಪ್ 46 ಸಿನಿಮಾ ಬಗ್ಗೆ ಯಾವ್ದೇ ಮಾಹಿತಿ ಹೊರ ಬಂದಿಲ್ಲ. ಟೈಟಲ್ ಆನೌನ್ಸ್ ಮಾಡಿಲ್ಲ, ನಿರ್ದೇಶಕ, ನಾಯಕಿ ಯಾರೆಂದು ಹೇಳಿಲ್ಲ. ಈಗ K46 ಬಗ್ಗೆ ಸ್ವತಹ ಸುದೀಪ್ ಅವರೇ ಹೊಸ ಟಪ್ಡೇಟ್ ಕೊಟ್ಟಿದ್ದಾರೆ. ತಮ್ಮ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಡೇಟ್ಅನ್ನ ಅನೌನ್ಸ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ: ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ: ಬೆಸ್ಟ್ ಫ್ರೆಂಡ್ ಕೊಲೆಗೆ ಕಾರಣ ಅವಳು..!