Laka Laka Lambargini: ಚಂದನ್ ಶೆಟ್ಟಿ ಜೊತೆ ಬೊಂಬಾಟ್ ಸ್ಟೆಪ್ ಹಾಕಿದ ರಚಿತಾ ರಾಮ್

ಸ್ಯಾಂಡಲ್‌ವುಡ್‌ನ ಡಿಂಪಲ್ ಹುಡುಗಿ ರಚಿತಾ ರಾಮ್‌ ಮತ್ತು ರ‍್ಯಾಪರ್ ಚಂದನ್ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿರುವ ‘ಲಕ ಲಕ ಲ್ಯಾಂಬೋರ್ಗಿನಿ’ ಹಾಡು ರಿಲೀಸ್ ಆಗಿದೆ. ರಚಿತಾ ರಾಮ್, ಚಂದನ್‌ ಶೆಟ್ಟಿ ಜೊತೆಗೆ ಬೋಲ್ಡ್ ಲುಕ್‌ನಲ್ಲಿ ಈ ಹಾಡಿಗೆ ಸಖತ್​ ಆಗಿ ಡ್ಯಾನ್ಸ್ ಮಾಡಿದ್ದು, ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ (Sandalwood) ಡಿಂಪಲ್ ಹುಡುಗಿ ರಚಿತಾ ರಾಮ್‌ (Rachita ram) ಮತ್ತು ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಜೋಡಿಯಾಗಿ ಕಾಣಿಸಿಕೊಂಡಿರುವ ‘ಲಕ ಲಕ ಲ್ಯಾಂಬೋರ್ಗಿನಿ’ (Laka Laka Lamborghini) ಹಾಡು ರಿಲೀಸ್ ಆಗಿದೆ. ಬಿಂದ್ಯಾ ಮೂವೀಸ್​ ಮೂಲಕ ನಿರ್ಮಾಣವಾದ ಈ ಬೊಂಬಾಟ್ ಹಾಡನ್ನು ಇತ್ತೀಚೆಗೆ ಖಾಸಗಿ ಹೋಟೆಲ್​ವೊಂದರಲ್ಲಿ ಲಾಂಚ್ ಮಾಡಲಾಗಿದೆ. ಈ ಹಾಡಿನಲ್ಲಿ ರಚಿತಾ ರಾಮ್, ಚಂದನ್‌ ಶೆಟ್ಟಿ ಜೊತೆಗೆ ಬೋಲ್ಡ್ ಲುಕ್‌ನಲ್ಲಿ ಸಖತ್​ ಆಗಿ ಡ್ಯಾನ್ಸ್ ಮಾಡಿದ್ದು, ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Rachita Ram: ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ ಡಿಂಪಲ್ ಕ್ವೀನ್!

3 ಪೆಗ್​, ಚಾಕೊಲೇಟ್​ ಗರ್ಲ್​, ಪಾರ್ಟಿ ಫ್ರೀಕ್​ ಹೀಗೆ ಹಲವು ಆಲ್ಬಂ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ರ‍್ಯಾಪರ್ ಚಂದನ್ ಶೆಟ್ಟಿ ಈ ಹಾಡಿಗೆ ಸಾಹಿತ್ಯ, ಸಂಗೀತದ ಜೊತೆಗೆ ಹಾಡಿಗೆ ದನಿಯಾಗಿದ್ದಾರೆ. ಶೇಖರ್​ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​ ಸಂಕಲನ, ಮುರಳಿ ಮಾಸ್ಟರ್​ ನೃತ್ಯ ನಿರ್ದೇಶನ, ಮೋಹನ್​ ಬಿ. ಕೆರೆ ಕಲಾ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಿರ್ದೇಶಕ ನಂದಕಿಶೋರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದು, ನಿರ್ಮಾಪಕ ಕೆ. ಮಂಜು ಅವರು ಈ ಹಾಡನ್ನು ರಿಲೀಸ್​ ಮಾಡಿದ್ದಾರೆ. 'ಲಕ ಲಕ' ಸಾಂಗ್​ ರೀಲಿಸ್ ಆದಾಗ ಟ್ರೆಂಡಿಂಗ್​ನಲ್ಲಿತ್ತು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video