ಅನಿರೀಕ್ಷಿತವಾಗಿ ಬನ್ನಿ ಹೊಡೆದೇ ಬಿಟ್ಟರೂ ಪುಷ್ಪ 2 ಪಂಚ್ ಡೈಲಾಗ್: ಹೇಗಿದೆ ಗೊತ್ತಾ ?
ಪುಷ್ಪ 2 ಪಂಚ್ ಡೈಲಾಗ್ ವಿಡಿಯೋ ಲೀಕ್
ಅಂದು ತಗ್ಗೇದೆ ಲೆ.. ಇಂದು ಪುಷ್ಪ ರೂಲ್
ಅಲ್ಲು ಅರ್ಜುನ್ ಡೈಲಾಗ್ ವಿಡಿಯೋ ವೈರಲ್
ಪುಷ್ಪ ಸಿನಿಮಾ ನೋಡಿದವರು ಥಿಯೇಟರ್ನಿಂದ ಆಚೆ ಬರುತ್ತಲೇ ಆ ಪಂಚ್ ಡೈಲಾಗ್ ಹೇಳ್ಕೊಂಡು ಆಚೆ ಬಂದಿದ್ದರು. ಯಾವುದಕ್ಕೆ ತಗ್ಗೋದೆ ಇಲ್ಲ. ತಗ್ಗೇದೆ ಲೇ ಅನ್ನೋ ಪಂಚ್ ಡೈಲಾಗ್ ಅಷ್ಟೊಂದು ಫೇಮಸ್ಸಾಗಿತ್ತು. ಇದೀಗ ಅಲ್ಲೂ ಅರ್ಜುನ್(Allu Arjun) ವಿಜಯ್ ದೇವರಕೊಂಡ ಸೋದರನ ಸಿನಿಮಾ ಬೇಬಿ ಯಶಸ್ಸಿನ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಆಗ ಅಭಿಮಾನಿಗಳ ಬೇಡಿಕೆ ಮೇರೆಗೆ ಪುಷ್ಪ 2(Pushpa 2) ಸಿನಿಮಾದ ಪಂಚ್ ಡೈಲಾಗ್ ಹೇಳುವಂತೆ ಒತ್ತಾಯಿಸಿದರು. ಆಗ ಸ್ವತಃ ಅಲ್ಲೂ ಅರ್ಜುನ್ ಆ ಡಯಲಾಗ್ ಹೇಳಿ ಬಿಟ್ಟರು.ಅಭಿಮಾನಿಗಳ ಕೋರಿಕೆಯಂತೆ ಪುಷ್ಪ 2 ಚಿತ್ರದ ಡೈಲಾಗ್ ಹೇಳುವ ಮೂಲಕ ಬನ್ನಿ ರಂಜಿಸಿದರು. "ಇದೆಲ್ಲಾ ನಡೆಯುವುದು ಒಂದೇ ರೂಲ್ ಮೇಲೆ..ಅದು ಪುಷ್ಪ ನಿಯಮ" ಎನ್ನುವ ಅಲ್ಲು ಅರ್ಜುನ್ ಅವರ ಡೈಲಾಗ್ ಆಕರ್ಷಕವಾಗಿದೆ. ಇತ್ತೀಚಿಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಬದ್ಧರಾಗ್ತಾರಾ ಸುದೀಪ್-ಕುಮಾರ್ ?