ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಬದ್ಧರಾಗ್ತಾರಾ ಸುದೀಪ್-ಕುಮಾರ್ ?

ಚಿತ್ರರಂಗದ ಸಮಸ್ಯೆ ಬಗೆಹರಿಸ್ತಾರಾ ಕ್ರೇಜಿಸ್ಟಾರ್..?
ಸುದೀಪ್-ಕುಮಾರ್ ವಿವಾದಕ್ಕೆ ಸಿಗಲಿದೆಯಾ ಉತ್ತರ
ಕ್ರೇಜಿಸ್ಟಾರ್ ನಿರ್ಧಾರಕ್ಕೆ ಓಕೆ ಅಂತಾರಾ ಇಬ್ಬರು ?

First Published Jul 23, 2023, 2:44 PM IST | Last Updated Jul 23, 2023, 2:44 PM IST

ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ  ಅಲ್ಲೋ ಕಲ್ಲೋಲ ಸೃಷ್ಟಿಸಿದ ಕಿಚ್ಚ ಸುದೀಪ್(Actor Sudeep) ಮತ್ತು ಎನ್‌. ಕುಮಾರ್(N Kumar) ವಿವಾದ. ನಟ ನಿರ್ಮಾಪಕರ ನಡುವಿನ ಜಟಾಪಟಿ ಕೋರ್ಟ್ ಮೆಟ್ಟಿಲೇರಿದೆ. ಮತ್ತೊಂದು ಕಡೆ ಎನ್ ಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ, ನ್ಯಾಯ ಕೊಡಿಸುವಂತೆ  ಪ್ರತಿಭಟನೆ ಮಾಡುತ್ತಿದ್ದರು. ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್(Crazy star Ravichandran) ಬಳಿ ನಿರ್ಮಾಪಕ ಕುಮಾರ್ ಮನವಿ ಮಾಡಿರುವುದರಿಂದ ಇಬ್ಬರಿಗೂ ಸರಿಯಾದ ನ್ಯಾಯಕೊಡಿಸಲು ಮುಂದಾಗಿದ್ದಾರೆ. ಈಗಾಗಲೇ ಕಿಚ್ಚ ನಿರ್ಮಾಪಕ ಎನ್ ಕುಮಾರ್ ದಾಖಲೆಗಳಿಲ್ಲದೆ ವಿನಾಕಾರಣ ನನ್ನ ಹೆಸರಿಗೆ ಮಸಿ ಬಳಿಯುತ್ತಿದ್ದಾರೆಂದು ಕೋರ್ಟ್ನಲ್ಲಿ ಮಾನನಸ್ಟ ಮೊಕದ್ದಮೆ ಹೂಡಿದ್ದಾರೆ. ಈ ನಡುವೆ ಕುಮಾರ್ ಮತ್ತು ಕಿಚ್ಚನನ್ನು ಒಟ್ಟಿಗೆ ಕರೆದು ರವಿಂಚಂದ್ರನ್ ಸಭೆ ನಡೆಸಿದ್ದಾರೆ. ಈ ವೇಳೆ ಪ್ರತಿಯೊಂದು ವಿಚಾರವನ್ನೂ ಬರೆದುಕೊಂಡುವಂತೆ ಕುಮಾರ್ಗೆ ಕೇಳಿದ್ದಾರೆ. ದಾಖಲೆಗಳಿದ್ದರೆ ಮಾತ್ರ ನಾನು ಪರಿಹರಿಸೋಕೆ ಮುಂದಾಗುತ್ತೇನೆ ಎಂದಿದ್ದ ರವಿಚಂದ್ರನ್ ಅದರಂತೆ ದಾಖಲೆ ಕೇಳಿದ್ದಾರೆ. ಅದರಂತೆ ಕುಮಾರ್ ಶುಕ್ರವಾರ ಕೆಲ ದಾಖಲೆ ನೀಡಿದ್ದಾರೆನ್ನಲಾಗಿದೆ. ಏನೇ ಆದರೂ ಇದಿ ಭಾನುವಾರ ಈ ವಿವಾದಕ್ಕೆ ಅಂತ್ಯ ಹಾಡುತ್ತಾರೆನ್ನಲಾಗಿದೆ. ಸೋಮುವಾರ ಅಧಿಕೃತವಾಗಿ ಹೇಳಿಕೆ ನೀಡುತ್ತಾರೆನ್ನಲಾಗಿದೆ. ನಟರಾಗಿ ನಿರ್ಮಾಪಕರಾಗಿಯೂ ಗುರ್ತಿಸಿಕೊಂಡಿರುವ ರವಿಚಂದ್ರನ್ ಇದೇ ಮೊದಲ ಬಾರಿಗೆ ಚಿತ್ರರಂಗದ ಸಮಸ್ಯೆಯನ್ನು ಮುಂದೆ ನಿಂತು ಬಗೆ ಹರಿಸುತ್ತಿದ್ದು. ಇದು ರವಿಚಂದ್ರನ್ ಮೊದಲ ವಿಕ್ಟರಿ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ: ಇಲ್ಲಿತನಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಕನ್ನಡ ಚಿತ್ರಗಳು ಯಾವುವು ಗೊತ್ತಾ?