James 2022: ಮಹಾಶಿವರಾತ್ರಿಗೆ ರಿಲೀಸ್ ಆಯ್ತು ಪವರ್ ಪ್ಯಾಕ್ಡ್ 'ಟ್ರೇಡ್​ಮಾರ್ಕ್' ಸಾಂಗ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್' ಸಾಂಗ್ ಶಿವರಾತ್ರಿ ಹಬ್ಬದಂದು ಬಿಡುಗಡೆಯಾಗಿದೆ. ಟ್ರೇಡ್‌ ಮಾರ್ಕ್ ಲಿರಿಕಲ್ ಹಾಡು ಇದಾಗಿದ್ದು, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಝಲಕ್ ಇಲ್ಲಿ ನೋಡಬಹುದು. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್' ಸಾಂಗ್ ಶಿವರಾತ್ರಿ ಹಬ್ಬದಂದು ಬಿಡುಗಡೆಯಾಗಿದೆ. ಟ್ರೇಡ್‌ ಮಾರ್ಕ್ (Trademark) ಲಿರಿಕಲ್ ಹಾಡು ಇದಾಗಿದ್ದು, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಝಲಕ್ ಇಲ್ಲಿ ನೋಡಬಹುದು. ಪಿಆರ್‌ಕೆ ಆಡಿಯೋ (PRK Audio) ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿನ ಸಂಗೀತ ನಿರ್ದೇಶನ ಮತ್ತು ಸಂಯೋಜನೆ ಮಾಡಿರುವುದು ಚರಣ್ ರಾಜ್ (Charan Raj). ಲೀಡ್ ಧ್ವನಿಯಲ್ಲಿ ಎಮ್‌ಸಿ ವಿಕ್ಕಿ (MC vikki), ಆದಿತಿ ಸಾಗರ್ (Aditi Sagar), ಚಂದನ್ ಶೆಟ್ಟಿ (Chandan Shetty), ಶರ್ಮಿಳಾ, ಯುವ ರಾಜ್‌ಕುಮಾರ್ (Yuva Rajkumar) ಮತ್ತು ಚರಣ್‌ ಇದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

James 2022 ಹೊಸಪೇಟೆಯಿಂದ ಹೊರಡಲಿದೆ ಅಪ್ಪು ಜೇಮ್ಸ್‌ ಪ್ರಚಾರದ ತೇರು!

ಹಾಡಿನ ಸಾಹಿತ್ಯವನ್ನು ಚೇತನ್ ಕುಮಾರ್ (Chetan Kumar) ಮಾಡಿದ್ದಾರೆ. ಟ್ರೇಡ್‌ಮಾರ್ಕ್‌ ಹಾಡಿನ ಆರಂಭದಲ್ಲಿ 'ಜೇಮ್ಸ್' ಸಿನಿಮಾ ಮುಹೂರ್ತದಲ್ಲಿ ಅಶ್ವಿನಿ (Ashwini Puneeth) ಕ್ಲಾಪ್ ಹೊಡೆದಿರುವ ವಿಡಿಯೋವನ್ನೂ ಸೇರಿಸಲಾಗಿದೆ. ಆನಂತರ ಹಾಡಿನಲ್ಲಿ ರಚಿತಾ ರಾಮ್ (Rachita Ram), ಶ್ರೀಲೀಲಾ (Shreeleela), ಚರಣ್ ರಾಜ್, ಚಂದನ್ ಶೆಟ್ಟಿ, ಯುವ ರಾಜ್‌ಕುಮಾರ್, ಆಶಿಕಾ ರಂಗನಾಥ್ (Ashika Ranganath) ಹೆಜ್ಜೆ ಹಾಕಿದ್ದಾರೆ. ಸಿನಿಮಾ ಚಿತ್ರೀಕರಣ ಸಣ್ಣ ಪುಟ್ಟ ವಿಡಿಯೋ ಕ್ಲಿಪ್‌ಗಳನ್ನು ಸಹ ಸೇರಿಸಲಾಗಿದೆ. ಈ ಮೂಲಕ ಅಪ್ಪು ಸಿನಿಮಾಗೆ ಇಡೀ ಚಿತ್ರರಂಗವೇ ಸಾಥ್ ಕೊಟ್ಟಿದೆ. ಪುನೀತ್ ಹುಟ್ಟುಹಬ್ಬ ಮಾರ್ಚ್ 17ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video