Asianet Suvarna News Asianet Suvarna News

'ನನ್ನ ಕಂ ಬ್ಯಾಕ್ ಸಿನಿಮಾ ಪುನೀತ್ ಅವರೊಂದಿಗೆ ಆಗಬೇಕಿತ್ತು'

* ಸ್ಯಾಂಡಲ್ ವುಡ್ ಗೆ ಪುನೀತ್ ನಿಧನದ ಆಘಾತ
* ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದ ರಮ್ಯಾ 
* 'ಅಭಿ' ಚಿತ್ರದಲ್ಲಿ ಪುನೀತ್ ಜತೆ  ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು
* ಇಬ್ಬರಿಗೂ ಒಂದು ಸಿನಿಮಾ ಆಫರ್ ಬಂದಿತ್ತು 

Oct 29, 2021, 8:17 PM IST

ಬೆಂಗಳೂರು( ಅ. 29) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ.  ರಮ್ಯಾ ಅವರ ಮೊದಲ ಚಿತ್ರ 'ಅಭಿ' ಯಲ್ಲಿ ರಮ್ಯಾ (Ramya Divya Spandana) ಪುನೀತ್ ಜತೆಗೆ ಕಾಣಿಸಿಕೊಂಡಿದ್ದರು.

ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡ ರಾಘವೇಂದ್ರ ರಾಜ್‌ಕುಮಾರ್

ಅವರ ಬ್ಯಾನರ್ ನಲ್ಲಿ ಮೊದಲ ಸಿನಿಮಾ ಮಾಡಿದೆ. ಅವವರಿಗೆ ಯಾವ ಹಮ್ಮು ಬಿಮ್ಮು ಇರಲಿಲ್ಲ. ನಗುತ್ತಲೇ ಮಾತನಾಡಿಸುತ್ತಿದ್ದರು.. ಕಾಲೆಳೆಯುತ್ತಿದ್ದರು. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ಅವರ ಜತೆಗಿನ ಚಿತ್ರದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾನು ಕಂ ಬ್ಯಾಕ್ ಮಾಡಬೇಕಿತ್ತು ಎಂದರು. 'ಅರಸು. ಚಿತ್ರದಲ್ಲಿ ರಮ್ಯಾ-ಪುನೀತ್ ಅಭಿನಯಿಸಿದ್ದರು.