James 2022: ಅಪ್ಪು ಕೊನೆ ಚಿತ್ರವನ್ನು ನೋಡಿ ಪುನೀತರಾದ ಅಭಿಮಾನಿಗಳು

ಡಾ. ಪುನೀತ್ ರಾಜ್‍ಕುಮಾರ್ ಅಭಿನಯದ 'ಜೇಮ್ಸ್' ಗುರುವಾರ ವಿಶ್ವಾದ್ಯಂತ ರಿಲೀಸ್ ಆಗಿತ್ತು. 'ಜೇಮ್ಸ್' ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆಗಿದ್ದರಿಂದ ಸಿನಿಮಾವನ್ನು ಅಭಿಮಾನಿಗಳು ಹಬ್ಬದ ರೀತಿ ಬರಮಾಡಿಕೊಂಡಿದ್ದರು.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿನಯದ 'ಜೇಮ್ಸ್' (James) ಗುರುವಾರ ವಿಶ್ವಾದ್ಯಂತ ರಿಲೀಸ್ ಆಗಿತ್ತು. 'ಜೇಮ್ಸ್' ಅಪ್ಪು ಹುಟ್ಟುಹಬ್ಬದ (Birthday) ದಿನ ರಿಲೀಸ್ ಆಗಿದ್ದರಿಂದ ಸಿನಿಮಾವನ್ನು ಅಭಿಮಾನಿಗಳು ಹಬ್ಬದ ರೀತಿ ಬರಮಾಡಿಕೊಂಡಿದ್ದರು. ಈ ಸಿನಿಮಾ ನೋಡಬೇಕೆಂದು ಅಭಿಮಾನಿಗಳು ವಾರದ ಮುನ್ನವೇ ಟಿಕೆಟ್‍ಗಳನ್ನು ಬುಕ್ ಮಾಡಿಕೊಂಡಿದ್ದರು. 'ಜೇಮ್ಸ್‌' ಸಿನಿಮಾ ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಜೇಮ್ಸ್‌' ದರ್ಶನವಾಗಿತ್ತು. 150ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಶೋ ಪ್ರದರ್ಶನ ಕಂಡಿತ್ತು. 

James 2022: ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ ಪ್ರಿಯಾ ಆನಂದ್

ಬೆಳಗ್ಗೆ 6 ಗಂಟೆಯಿಂದಲೇ ಚಿತ್ರದ ಶೋ ಆರಂಭವಾಗಿದ್ದು, ಚಿತ್ರವನ್ನು ವೀಕ್ಷಿಸಿ ಬಂದ ಅಭಿಮಾನಿಗಳು, ಅಪ್ಪು ಫೈಟಿಂಗ್, ಡ್ಯಾನ್ಸು, ಡೈಲಾಗ್ ಎಲ್ಲವೂ ಸೂಪರ್ ಎಂದು ಚಿತ್ರದ ಬಗ್ಗೆ ಹೊಗಳಿದರು. ಕೆಲ ಅಭಿಮಾನಿಗಳು ಶೋ ಬಳಿಕ ಅಪ್ಪು ಅನುಪಸ್ಥಿತಿಯನ್ನು ನೆನಯುತ್ತಾ ಕಣ್ಣೀರು ಹಾಕಿದರು. ಕೆಲವು ಚಿತ್ರಮಂದಿರಗಳಲ್ಲಿ ಪುನೀತ್ ಹೆಸರಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. 'ಜೇಮ್ಸ್‌' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video