
Puneetha parva; ಅಪ್ಪು ಸರ್ ಘಟನೆ ಜೀವನ ಎಂದರೆ ಏನು ಎನ್ನುವ ಪ್ರಶ್ನೆ ಮೂಡಿಸಿತು-ಯಶ್
ಅಪ್ಪು ಸರ್ ಘಟನೆ ನನಗೆ ಜೀವನ ಎಂದರೆ ಏನು ಎನ್ನುವ ಪ್ರಶ್ನೆ ಹುಟ್ಟಿಸಿತು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.
ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಎಲ್ಲರೂ ಗಂಧದ ಗುಡಿ ನೋಡಿ ಎಂದು ಹೇಳಿದರು. ಕೆಜಿಎಫ್ ರೆಕಾರ್ಡ್ ಅನ್ನು ಬ್ರೇಕ್ ಮಾಡಬೇಕು ಅಷ್ಟರ ಮಟ್ಟಿಗೆ ಹಿಟ್ ಆಗಬೇಕು ಎಂದು ಹೇಳಿದರು. ಒಂದು ವರ್ಷದ ಕೆಳಗೆ ಹತ್ತಿರ ಇದೇ ದಿನ ಅಪ್ಪು ಸರ್, ಶಿವಣ್ಣ ಮತ್ತು ನಾನು ಸ್ಟೇಜ್ ಮೇಲೆ ಡಾನ್ಸ್ ಮಾಡಿದ್ದು ಇನ್ನು ನೆನಪಿದೆ. ತುಂಬಾ ದಿನ ಆಗಿತ್ತು ಸಿಗದೆ ಅವತ್ತು ಸಿಕ್ಕದ್ರು. ತುಂಬಾ ಮಾತನಾಡ್ವಿ. ಅವರನ್ನು ನೋಡಿದ್ರೆ ನನಗೆ ಹೊಮ್ಮಸ್ಸು ಬರ್ತಿತ್ತು ಎಂದು ಹೇಳಿದರು. ಅವರ ಡಾನ್ಸ್, ಫೈಟ್ ನೋಡಿ ಅವರ ತರ ಮಾಡಬೇಕು ಎನ್ನುವುದು ಎಷ್ಟೋ ಜನಕ್ಕೆ ಸ್ಪೂರ್ತಿ ಎಂದರು. ಅಪ್ಪು ಸರ್ ಘಟನೆ ನನಗೆ ಜೀವನ ಎಂದರೆ ಏನು ಎನ್ನುವ ಪ್ರಶ್ನೆ ಹುಟ್ಟಿಸಿತು ಎಂದು ಹೇಳಿದರು.