ದುಬೈ ಸೇರಿದ ಪುನೀತ್ ರಾಜ್‌ಕುಮಾರ್ ಫೇವರಿಟ್ ಲ್ಯಾಂಬೋರ್ಘಿನಿ ಕಾರು

ಪುನೀತ್ ನಿಧನದ ಬಳಿಕ ನಾಲ್ಕು ಕೋಟಿ ಬೆಲೆ ಬಾಳೋ ಈ ಲ್ಯಾಂಬೋರ್ಗಿನಿ ಕಾರನ್ನ ಯಾರೂ ಬಳಸುತ್ತಿರಲಿಲ್ಲ. ಇದೀಗ ಈ ಲ್ಯಾಂಬೋರ್ಗಿನಿ ಕಾರು ದುಬೈ ಸೇರಿದೆ. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲವಾಗಿ 10 ತಿಂಗಳಾಯ್ತು. ಅಪ್ಪುರನ್ನ ಅಭಿಮಾನಿಗಳು ದೇವರಂತೆ ಪೂಜಿಸುತ್ತಿದ್ದಾರೆ. ಅಪ್ಪುಗೆ ಕಾರು ಬೈಕ್ಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್. ಹೀಗಾಗಿ ಪುನೀತ್ ಬಳಿ ಐಶಾರಾಮಿ ಕಾರುಗಳಿದ್ವು. ಬೆನ್ಜ್, ಆಡಿ, ಲ್ಯಾಂಬೋರ್ಗಿನಿ ಸೇರಿದಂತೆ ಬೆಲೆಬಾಳೋ ಕಾರುಗಳಿವೆ. ಅಪ್ಪು ಹಲವು ಭಾರಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸುತ್ತಿದ್ದನ್ನ ನೋಡಿದ್ದೀರಾ. 2019ರಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಪತ್ನಿ ಅಶ್ವಿನಿ ಅವರಿಗೆ ಈ ಕಾರನ್ನ ಅಪ್ಪು ಉಡುಗೊರೆಯಾಗಿ ಕೊಟ್ಟಿದ್ರು. ಆದ್ರೆ ಆದರೆ ಆ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದದ್ದು ಪುನೀತ್ ರಾಜ್ ಕುಮಾರ್. ಆದ್ರೆ ಪುನೀತ್ ನಿಧನದ ಬಳಿಕ ನಾಲ್ಕು ಕೋಟಿ ಬೆಲೆ ಬಾಳೋ ಈ ಲ್ಯಾಂಬೋರ್ಗಿನಿ ಕಾರನ್ನ ಯಾರೂ ಬಳಸುತ್ತಿರಲಿಲ್ಲ. ಇದೀಗ ಈ ಲ್ಯಾಂಬೋರ್ಗಿನಿ ಕಾರು ದುಬೈ ಸೇರಿದೆ. ಪುನೀತ್ ಪತ್ನಿ ಅಶ್ವಿನಿ ಅವರು ದುಬೈನಲ್ಲಿರೋ ತನ್ನ ಸಹೋದರನಿಗೆ ಕೊಟ್ಟಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video