ಕೇಕ್‌ ಕಟ್‌ ಮಾಡಿ ಬಡ ಮಕ್ಕಳಿಗೆ ಕೊಡಿ, ಅವರ ನಗುವಿನಲ್ಲಿ ಅಪ್ಪು ಕಾಣಿ: ಅಭಿಮಾನಿಗಳಿಗೆ ರಾಘಣ್ಣ ಸಲಹೆ

ಪುನೀತ್‌ ರಾಜ್‌ ಕುಮಾರ್‌ 2ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಕುಟುಂಬಸ್ಥರು ಸಮಾಧಿ ಬಳಿ ಆಗಮಿಸಿ,ಪೂಜೆ ಸಲ್ಲಿಸಿದರು.
 

Share this Video
  • FB
  • Linkdin
  • Whatsapp

ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) 2ನೇ ವರ್ಷದ ಪುಣ್ಯ (Death anniversary) ಹಿನ್ನೆಲೆ ಕಂಠೀರವ ಸ್ಟುಡಿಯೋ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು(Fans) ಆಗಮಿಸುತ್ತಿದ್ದಾರೆ. ಪುನೀತ್‌ ಪತ್ನಿ ಅಶ್ವಿನಿ, ಮಗಳು, ರಾಘವೇಂದ್ರ ರಾಜ್‌ ಕುಮಾರ್‌ ಸೇರಿದಂತೆ ಕುಟುಂಬಸ್ಥರೆಲ್ಲಾರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದರು. ಪುನೀತ್‌ ರಾಜ್‌ ಕುಮಾರ್ ಮಗಳು ಅಭಿಮಾನಿಗಳಿಗೆ ಪ್ರಸಾದವನ್ನು ಹಂಚಿದರು. 'ಮುತ್ತು' ರಾಜನನ್ನು ನೆನೆದು ದೊಡ್ಮನೆಯವರು ಕಂಬನಿಯನ್ನು ಮಿಡಿದರು. ಇನ್ನೂ ಅಲ್ಲಿಗೆ ಬಂದ ಪುಟ್ಟ ಪುಟ್ಟ ಮಕ್ಕಳು ಅಪ್ಪು ಹೆಸರನ್ನು ಹಚ್ಚೆ ಹಾಕಿಕೊಂಡಿದ್ದರು. ಪುನೀತ್‌ ಅಕ್ಕಂದಿರು ಅವರನ್ನು ನೆನೆದು ಕಣ್ಣೀರು ಹಾಕಿದರು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸೋ ಸಾಧ್ಯತೆ ಇದ್ದು, ಕಂಠೀರವ ಸ್ಟುಡಿಯೋ ಬಳಿ ಫೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ವೀಕ್ಷಿಸಿ: ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಹಾಕಿದ ತುಮಕೂರಿನ ಅಜ್ಜಿ !

Related Video