
ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಹಾಕಿದ ತುಮಕೂರಿನ ಅಜ್ಜಿ !
ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಹಾಕಿದ ಅಜ್ಜಿ
ಮಂಡಕ್ಕಿ ಹಾರ ಹಾಕಿದ ಅಜ್ಜಿ ಸುಮಿತ್ರಾ ಬಾಯಿ
ರಾಜ್ಕುಮಾರ್ ಸಮಾಧಿಗೆ ಅಜ್ಜಿಯ ಮಂಡಕ್ಕಿ ಹಾರ
ನಟ ಪುನೀತ್ ರಾಜ್ ಕುಮಾರ್(Puneeth Rajkumar) ಪುಣ್ಯ ಸ್ಮರಣೆ (Death Anniversary)ಹಿನ್ನಲೆ ಸಮಾಧಿಗೆ ನಮಿಸಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಹಾಸನ,ಹೊಳೆನರಸೀಪುರ , ಪಿರಿಯಾಪಟ್ಟಣ ,ಕೊಪ್ಪಳ, ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆಯಿಂದ ಅಭಿಮಾನಿಗಳು(Fans) ಬರುತ್ತಿದ್ದಾರೆ. ಅಪ್ಪು ಸಮಾಧಿಗೆ ನಮಿಸಲು ಹಲವಾರು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಜೊತೆಗೆ ಪುನೀತ್ ಪರ ಜಯ ಘೋಷ ಕೂಗುತ್ತಿದ್ದಾರೆ. ತುಮಕೂರಿನಿಂದ(Tumakuru) ಬಂದ ಸುಮಿತ್ರಾ ಬಾಯಿ ಎಂಬ ಅಜ್ಜಿ ಮಂಡಕ್ಕಿ ಹಾರ ಹಾಕಿ ಪುನೀತ್ ರಾಜ್ ಕುಮಾರ್‌ಗೆ ನಮಿಸಿದರು.ಇವರು ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್‌ಗೆ ಮಂಡಕ್ಕಿ ಹಾರ ಹಾಕುತ್ತಿದ್ದರು. ಈಗ ಅಪ್ಪು ಸಮಾಧಿಗೂ ಹಾಕಿದ್ದಾರೆ.
ಇದನ್ನೂ ವೀಕ್ಷಿಸಿ: ಕಬ್ಬು ತುಂಬಿದ ಟ್ರ್ಯಾಕ್ಟರ್ ಚಲಾಯಿಸಿದ ಮಹಿಳೆ: ನೆಟ್ಟಿಗರಿಂದ ಮಹಾದೇವಿಗೆ ಶಹಬ್ಬಾಸ್ ಗಿರಿ, ವಿಡಿಯೋ ವೈರಲ್