
ಅಪ್ಪನ ಪೊಲೀಸ್ ವೃತ್ತಿಯಿಂದ ಅಮ್ಮನಿಗೆ ತೊಂದರೆ ಆಗಿತ್ತು: ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಸುವರ್ಣ ನ್ಯೂಸ್'ನ ಹೊಸ ವರ್ಷದ ಕಾರ್ಯಕ್ರಮ 'ಸುವರ್ಣ ಪಾರ್ಟಿ'ಯಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ.
ಕಾಂತಾರ ಚಿತ್ರದ ಮೂಲಕ ವಿಶ್ವಾದ್ಯಂತ ಪರಿಚಯವಾಗಿರುವ ನಟಿ ಸಪ್ತಮಿ ಗೌಡ, ಅಪ್ಪನ ಬಗ್ಗೆ ಹಲವು ಇಂಟ್ರಸ್ಟಿಂಗ್ ಮಾಹಿತಿಯನ್ನು ಹೇಳಿದ್ದಾರೆ. ಅಪ್ಪನ ಪೊಲೀಸ್ ವೃತ್ತಿಯಿಂದ ನಮಗೆ ಯಾವುದೇ ತೊಂದ್ರೆ ಆಗಿಲ್ಲ, ಆದರೆ ಅಮ್ಮನಿಗೆ ಆಗಿತ್ತು ಎಂದರು. ಹಾಗೆ ಅಪ್ಪನ ಮೊದಲ ಸಂಬಳದ ಕುರಿತು ಹೇಳಿದರು. ಅದೇ ರೀತಿ ಸಿನಿಮಾ ಕ್ಷೇತ್ರದ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಈ ವರ್ಷ ಬಿಗ್ ಹಿಟ್ ಆದ ಮೂರು ಸಿನಿಮಾಗಳು, ಅವರ ಫೆವರೆಟ್ ಹೀರೋ ಯಾರು ಎಂದು ಕೇಳಲಾಯಿತು. ಹೀಗೆ ಹಲವು ಪ್ರಶ್ನೆಗಳಿಗೆ ತಂದೆ-ಮಗಳು ಉತ್ತರಗಳನ್ನು ನೀಡಿದ್ದಾರೆ.