ಮೈಸೂರಿನಲ್ಲಿ ವಿವಾದ ಎಬ್ಬಿಸಿದ ಪ್ರಭಾಸ್ ಮೇಣದ ಪ್ರತಿಮೆ !
ರಾಜ ಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಮಾಡಿದ ಮೋಡಿ , ಮಾಡಿದ ದಾಖಲೆ ಯಾರಿಗೆ ಗೊತ್ತಿಲ್ಲ ಹೇಳಿ. ಇಡಿ ವಿಶ್ವವೇ ಸೌತ್ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಅದರಲ್ಲೂ ಈ ಸಿನಿಮಾದ ನಾಯಕ ಪ್ರಭಾಸ್ ಮಾಡಿದ್ದ ಬಲಿಷ್ಟ ಶೂರ ಧೀರ ಬಾಹುಬಲಿ ಪಾತ್ರವಂತೂ ಅಧ್ಬುತವಾಗಿತ್ತು.
ಬಾಹುಬಲಿ ಪ್ರಭಾಸ್ ಮೇಣದ ಪ್ರತಿಮೆ ಇದೀಗ ಮೈಸೂರಿನ ಮ್ಯೂಸಿಯಂನಲ್ಲಿ(Mysore museum) ಇಡಲಾಗಿದೆ. ಆದರೆ ಈ ಪ್ರತಿಮೆ ವಿವಾದಕ್ಕೂ ನಗೆಪಾಟಲಿಗೂ ಕಾರಣವಾಗಿದೆ. ಅದಕ್ಕೆ ಕಾರಣ ಈ ಮೇಣದ ಪ್ರತಿಮೆ(Wax Statue) ಬಾಹುಬಲಿಯಂತೆ ಇರುವುದು ನಿಜ. ಆದರೆ ಪ್ರಭಾಸ್‌ರಂತೆ(Prabhas) ಇಲ್ಲ ಅನ್ನೋದೆ ಇದಕ್ಕೆ ಕಾರಣ. ಬದಲಿಗೆ ಈ ಮೇಣದ ಪ್ರತಿಮೆ ಕ್ರಿಕೆಟರ್ ಡೇವಿಡ್ ವಾರ್ನರ್‌ರಂತೆ ಕಾಣುತ್ತಿದೆ. ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ 'ಬಾಹುಬಲಿ' ಲುಕ್ ಮೇಣದ ಪ್ರತಿಮೆ ನಿರ್ಮಿಸಲಾಗಿದೆ. ಆ ಮ್ಯೂಸಿಯಂನಲ್ಲಿ ಪ್ರತಿಮೆ ನಿರ್ಮಾಣವನ್ನು ಎಲ್ಲರೂ ಪ್ರತಿಷ್ಠೆಯಾಗಿ ಭಾವಿಸುತ್ತಾರೆ. ಅಲ್ಲದೆ ಅದು ಥೇಟ್ ಪ್ರಭಾಸ್ರಂತೆ ಇದೆ, ಇದರ ಬೆನ್ನಲ್ಲೇ ಲೈಸೆನ್ಸ್ ಇಲ್ಲದೇ ಈ ರೀತಿ ಪ್ರತಿಮೆ ನಿರ್ಮಿಸಿದ್ದು ತಪ್ಪು ಎಂದು ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ ಟ್ವೀಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ಇದೇ ದೊಡ್ಡ ಹಂಗಾಮ ಸೃಷ್ಟಿಯಾಗಿದ್ದು. ಆದಷ್ಟು ಬೇಗ ಇದನ್ನು ತೆರೆವು ಗೊಳಿಸಿರೆಂದು ಪ್ರಭಾಸ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ.
ಇದನ್ನೂ ವೀಕ್ಷಿಸಿ: ಹೊಸ ಇತಿಹಾಸ ಬರೆಯಲು ಸಜ್ಜಾದ ಬೆಂಗಳೂರು: ತುಳುನಾಡಿನ ಕಂಬಳ ಕ್ರೀಡೆ ಸಿಲಿಕಾನ್ ಸಿಟಿಗೆ ಶಿಫ್ಟ್..!