Asianet Suvarna News Asianet Suvarna News

ಹೊಸ ಇತಿಹಾಸ ಬರೆಯಲು ಸಜ್ಜಾದ ಬೆಂಗಳೂರು: ತುಳುನಾಡಿನ ಕಂಬಳ ಕ್ರೀಡೆ ಸಿಲಿಕಾನ್‌ ಸಿಟಿಗೆ ಶಿಫ್ಟ್..!

ತುಳುನಾಡ ಮಂದಿಗೆ ಈ ನವೆಂಬರ್ ಬಂದ್ರೆ ಸಾಕು ದೊಡ್ಡ ಹಬ್ಬವೇ ಇದೆ. ಕಾರಣ, ಕಂಬಳ ಕ್ರೀಡೆಗೆ ಅಖಾಡ ಸಿದ್ಧವಾಗಿರುತ್ತೆ. ಕಂಬಳ ಅಖಾಡದಲ್ಲಿ ಕೋಣಗಳ ದರ್ಬಾರ್. ಗದ್ದೆಗೆ ಇಳಿದು ಶರವೇಗದಲ್ಲಿ ಓಡೋ ಕೋಣಗಳು. ಇದರ ಸಾರಥಿ.. ತಲೆಗೆ ಬಟ್ಟೆ, ಕೈಯಲ್ಲಿ ಲಗಾಮು ಸಿಕ್ರೆ ಗುರಿ ಮುಟ್ಟೋವರೆಗೂ ಛಲ ಬಿಡದೇ ಓಡೋ ಛಲದಂಕ ಮಲ್ಲ.
 

ಕಂಬಳ ಬರಿ ಕ್ರೀಡೆಯಲ್ಲ ತುಳುನಾಡ ಜೀವನಾಡಿ, ಈ ಕಂಬಳಕ್ಕಂತಾನೇ ಇಡಿ ಕರಾವಳಿ ಕಾದು ಕುಳಿತಿರುತ್ತೆ. ಕಂಬಳಕ್ಕೆ ಎಕರೆಗಟ್ಟಲೇ ಗದ್ದೆ ಹದ ಮಾಡಿ, ನೀರು ಬಿಟ್ಟು, 2 ತಿಂಗಳ ಮುಂಚೆಯೇ ರೆಡಿ ಮಾಡಿರ್ತಾರೆ. ಇನ್ನು ಅಚ್ಚರಿಯ ವಿಷಯ ಅಂದ್ರೆ ಕಂಬಳದಲ್ಲಿ(Kambala) ಅತೀ ಹೆಚ್ಚು ಅಭಿಮಾನಿಗಳು ಇರೋದು ಕೋಣಗಳಿಗೆ. ತಾಟೆ, ಕಾಟಿ, ಬೊಲ್ಲೆ, ಚೆನ್ನೆ, ಧೋಣಿ, ಕಾಲೆ, ಪಾಂಡು, ದೂಜೆ, ಮುಕೇಶೆ, ಅಪ್ಪು, ಬೊಟ್ಟಿಮಾರ್‌, ಬಾಬು, ಚಿನ್ನು ಈ ಹೆಸರಿನ ಟಾಪ್‌ ಕೋಣಗಳಿಗೆಲ್ಲ ಹುಚ್ಚು ಅಭಿಮಾನಿಗಳಿದ್ದಾರೆ. ಇದೇ ಅಭಿಮಾನ, ಸಂತೋಷ, ಕಂಬಳ, ಈಗ ತುಳುನಾಡು, ಕರಾವಳಿ ಟು ಬೆಂಗಳೂರಿಗೆ(Bengaluru) ಶಿಫ್ಟ್ ಆಗಿದೆ. ಇಷ್ಟ್ ದಿನ ಬರಿ ಕರಾವಳಿಯಲ್ಲಿ ಮಾತ್ರ ಕಂಬಳ ಕ್ರೀಡೆ ನೀಡಿತಿತ್ತು. ಆದ್ರೆ ಈಗ ಕರಾವಳಿ ಕ್ರೀಡೆ ಬೆಂಗ್ಳೂರಿಗೂ ಕಾಲಿಟ್ಟಿದ್ದು, ದೇಸಿ ಕ್ರೀಡೆ ಸಿಟಿಗೆ ಬಂದಿದೆ. ಇತ್ತೀಚೆಗೆ ಕಂಬಳವನ್ನ ಇಡೀ ವಿಶ್ವಕ್ಕೆ ಪರಿಚಸಿದ್ದು ಕಾಂತಾರಾ ಸಿನಿಮಾ. ಕಾಂತಾರ ಸಿನಿಮಾದ(Kantara movie) ಮೂಲಕ ಜಗತ್ತಿಗೆ ಅತಿಹೆಚ್ಚು ಚಿರಪರಿಚಿತವಾದ ಕೆಸರಿನ ಗದ್ದೆಯಲ್ಲಿ ಶರವೇಗದಲ್ಲಿ ಓಡುವ ಕೋಣಗಳ ಕಂಬಳವನ್ನು ಈಗ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ದಿನಗಣನೆ ಆರಂಭವಾಗಿದ್ದು, ತುಳು ಕೂಟದಿಂದ ಭರ್ಜರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಕಂಬಳ ಆಯೋಜಿಸಲಾಗುತ್ತಿದ್ದು, ನವೆಂಬರ್ 25ರಂದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಬೆಂಗಳೂರು ಕಂಬಳ’(Bengaluru Kambala) ನಡೆಯಲಿದೆ. 'ಜಯಚಾಮರಾಜೇಂದ್ರ ಒಡೆಯರ್‌ ಜೋಡುಕರೆ ಕಂಬಳ'ಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೆಂಗಳೂರು ಕಂಬಳ ನಡೆಸಲು ಕೆಲಸ ಶುರುವಾಗಿದೆ. 150ಕ್ಕೂ ಹೆಚ್ಚಿನ ಕೋಣಗಳು ಈ ಪೈಪೋಟಿಯಲ್ಲಿ ಭಾಗಿಯಾಗಲಿದೆ. ಸುಮಾರು 7 ಲಕ್ಷ ಜನ ಈ ಕಂಬಳದಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿದ್ದಾರೆ ಆಯೋಜಕರು. ನವೆಂಬರ್ ಅಂತ್ಯದಲ್ಲಿ ಬೆಂಗಳೂರು ಕಂಬಳ ಶುರುವಾಗಲಿದೆ. ಐಪಿಎಲ್ ಮಾದರಿಯಲ್ಲಿ ಕಂಬಳವನ್ನ ಆಯೋಜಿಸುವ ಚಿಂತನೆ ಶುರುವಾಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಪ್ರದೋಷ ಪೂಜೆ ಮಾಡಿ..ನಿಮ್ಮ ಕಷ್ಟಗಳಿಂದ ಮುಕ್ತಿ ಹೊಂದಿ

Video Top Stories