KV Raju Passes Away: ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಇನ್ನಿಲ್ಲ

ಕನ್ನಡ ಚಿತ್ರರಂಗ ಹಿರಿಯ ಸ್ಟ್ರಿಕ್ಟ್ ಡೈರೆಕ್ಟರ್ ಎಂದೇ ಕರೆಸಿಕೊಂಡಿದ್ದ ನಿರ್ದೇಶಕ ಕೆವಿ ರಾಜು ಅವರು ಇಹಲೋಕ ತ್ಯಜಿಸಿದ್ದಾರೆ. ಇವರು ಮಾಡಿರುವ ಚಿತ್ರಗಳು ಹುಟ್ಟು ಹಾಕಿದ ಪ್ರತಿಭೆಗಳು ಬಹಳಷ್ಟು. ಕನ್ನಡ ಹಾಗೂ ಹಿಂದಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಿರ್ದೇಶಕ ಇಹಲೋಕ ತ್ಯಜಿಸಿದ್ದಾರೆ.

First Published Dec 25, 2021, 3:55 PM IST | Last Updated Dec 25, 2021, 3:55 PM IST

ಕನ್ನಡ ಚಿತ್ರರಂಗ ಹಿರಿಯ ಸ್ಟ್ರಿಕ್ಟ್ ಡೈರೆಕ್ಟರ್ ಎಂದೇ ಕರೆಸಿಕೊಂಡಿದ್ದ ನಿರ್ದೇಶಕ ಕೆವಿ ರಾಜು ಅವರು ಇಹಲೋಕ ತ್ಯಜಿಸಿದ್ದಾರೆ. ಇವರು ಮಾಡಿರುವ ಚಿತ್ರಗಳು ಹುಟ್ಟು ಹಾಕಿದ ಪ್ರತಿಭೆಗಳು ಬಹಳಷ್ಟು. ಕನ್ನಡ ಹಾಗೂ ಹಿಂದಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಿರ್ದೇಶಕ ಇಹಲೋಕ ತ್ಯಜಿಸಿದ್ದಾರೆ. ಹುಲಿಯಾ, ಬೆಳ್ಳಿಮೋಡ, ಯುದ್ಧ ಕಾಂಡ, ಬೆಳ್ಳಿ ಕಾಲುಂಗುರ ಸಿನಿಮಾವನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರಿಗೂ ನಿರ್ದೇಶನ ಮಾಡಿದ್ದಾರೆ.

ಗಿಫ್ಟ್‌ ಹಿಡಿದು ಸಾಂತ ರೀತಿ ಮಕ್ಕಳೆದುರು ಬಂದ ನಿರ್ದೇಶಕ ಪನ್ನಗಾ ಭರಣ!

ಅನಾರೋಗ್ಯದಿಂದ ಕೆಲ ದಿನಗಳಿಂದ ಇವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಿರ್ದೇಶಕ ಇಹಲೋಕ ತ್ಯಜಿಸಿದ್ದಾರೆ. ಸೀನಿಯರ್ ಡೈರೆಕ್ಟರ್ ಅವರ ಅಗಲಿಕೆಗೆ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

Video Top Stories