Shiva 143 ಸಿನಿಮಾ ನೋಡಿ ಭಾವುಕರಾದ ಪೂರ್ಣಿಮಾ ರಾಮ್‌ಕುಮಾರ್‌

ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಹಾಗೂ ಅಳಿಯ ರಾಮ್‌ಕುಮಾರ್ ಸುಪುತ್ರ ಧೀರೆನ್ ರಾಮ್‌ಕುಮಾರ್ 'ಶಿವ143' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಿವ 143 ಸಿನಿಮಾ ನೋಡಿ ಪೂರ್ಣಿಮಾ ರಾಮಕುಮಾರ್‌ ಭಾವುಕರಾಗಿದ್ದಾರೆ. 

First Published Aug 27, 2022, 7:31 PM IST | Last Updated Aug 27, 2022, 7:31 PM IST

ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಹಾಗೂ ಅಳಿಯ ರಾಮ್‌ಕುಮಾರ್ ಸುಪುತ್ರ ಧೀರೆನ್ ರಾಮ್‌ಕುಮಾರ್ 'ಶಿವ143' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಿವ 143 ಸಿನಿಮಾ ನೋಡಿ ಪೂರ್ಣಿಮಾ ರಾಮಕುಮಾರ್‌ ಭಾವುಕರಾಗಿದ್ದಾರೆ. ತುಂಬಾ ಸಂತೋಷ ಆಗುತ್ತಿದೆ. ನನಗೆ ಹೇಳೋಕೆ ಆಗ್ತಿಲ್ಲ. ಜನರು ಚಿತ್ರವನ್ನು ನೋಡಿ ಯಾವ ರೀತಿ ಪ್ರತಿಕ್ರಿಯೆಯನ್ನು ಕೊಡುತ್ತಾರೆ ಅನ್ನೋದನ್ನ ನೋಡೋದಿಕ್ಕೆ ಕಾಯ್ತಿದ್ದೀನಿ. ಯಾಕಂದ್ರೆ ನಾನು ಅಮ್ಮನಾಗಿ ನನ್ನ ಮಗನ ಕೆಲಸ ಇಷ್ಟವಾಗುತ್ತದೆ. ನಿರ್ದೇಶಕ ಅನಿಲ್ ಕುಮಾರ್ ಚಿತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೇನೇ ಜಯಣ್ಣ ಅವರಿಗೆ ತುಂಬಾ ಥ್ಯಾಂಕ್ಸ್ ಹೇಳೋಕೆ ಇಷ್ಟಪಡುತ್ತಿನಿ. ಮಾತ್ರವಲ್ಲದೇ ಚಿತ್ರದಲ್ಲಿ ನಟಿಸಿದಂತಹ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪೂರ್ಣಿಮಾ ರಾಮಕುಮಾರ್‌ ತಿಳಿಸಿದರು. ಇನ್ನು ಶಿವ 143 ಸಿನಿಮಾ ಮಾಸ್ ಲವ್ ಸ್ಟೋರಿಯ ಚಿತ್ರ. ಧೀರೆನ್ ಹಾಗು ಮಾನ್ವಿತಾ ಜೋಡಿ ಈ ಸಿನಿಮಾದಲ್ಲಿ ಅಕ್ಷರಶಃ ಮೋಡಿ ಮಾಡಿದೆ. ತೆಲುಗು ಭಾಷೆಯ ಆರ್‌ಎಕ್ಸ್ 100 ಸಿನಿಮಾದ ರಿಮೇಕ್ ಈ ಶಿವ 143.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment