ಕೋಟಿ ಕೋಟಿ ಡೀಲ್‌ಗೆ ನಟಿ ಶ್ರೀಲೀಲಾ ತಾಯಿ ಸ್ಕೆಚ್; ಸ್ವರ್ಣಲತಾ ರೌಡಿಸಂ ವೀಡಿಯೋ ವೈರಲ್

ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಅವರಿಗೆ ಈಗ ಬಂಧನ ಭೀತಿ ಎದುರಾಗಿದೆ. ಖಾಕಿ ಪಡೆ ಸ್ವರ್ಣಲತಾ ಹುಟುಕಾಟ ಮಾಡುತ್ತಿದ್ದಾರೆ.ಬಂಧನಕ್ಕಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. 

Share this Video
  • FB
  • Linkdin
  • Whatsapp

ಶ್ರೀಲೀಲಾ, ಸ್ಯಾಂಡಲ್ವುಡ್ನಲ್ಲಿ ಸದ್ಯ ಟ್ರೆಂಡಿಂಗ್ನಲ್ಲಿರೋ ಹೀರೋಯಿನ್. ಕಿಸ್ ಸಿನಿಮಾದಿಂದ ಮನೆ ಮಾತಾದ ಶ್ರೀಲೀಲಾ, ಬೈ ಟು ಲವ್ ಕಥೆ ಹೇಳಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು ಭರಾಟೆಯಿಂದ ಬೆಳ್ಳಿತೆರೆ ಮೇಲೆ ಮೆರವಣಿಗೆ ಹೊರಟಿದ್ದಾರೆ. ಹಾಟ್ ಬ್ಯೂಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಅವರಿಗೆ ಈಗ ಬಂಧನ ಭೀತಿ ಎದುರಾಗಿದೆ. ಖಾಕಿ ಪಡೆ ಸ್ವರ್ಣಲತಾ ಹುಟುಕಾಟ ಮಾಡುತ್ತಿದ್ದಾರೆ. ಹಾಗಂತ ಇದು ಸಿನಿಮಾದಲ್ಲಲ್ಲಾ ರೀಯಲ್ ಲೈಫ್ನಲ್ಲಿ. ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಬಂಧನಕ್ಕಾಗಿ ಈಗಾಗಲೇ ಪೊಲೀಸರು ಬಲೆ ಬೀಸಿದ್ದಾರೆ. ಖ್ಯಾತ ರಾಜಕಾರಣಿಯೊಬ್ಬರಿಗೆ ಪ್ರತಿಷ್ಠಿತ ಅಲೆಯನ್ಸ್ ವಿಶ್ವ ವಿದ್ಯಾಲಯ ಮಾರಿಲಸು ಶ್ರೀಲೀಲಾ ತಾಯಿ ಸ್ವರ್ಣಲತಾ ಪ್ಲಾನ್ ಮಾಡಿದ್ರಂತೆ. ಇದಕ್ಕಾಗಿ ಅಲೆಯನ್ಸ್ ವಿಶ್ವ ವಿಧ್ಯಾಲಯದ ಮಾಜಿ ಚೇರ್ಮನ್ ಮಧುಕರ್ ಅಂಗೂರ್ ಅನ್ನೋ ವ್ಯಕ್ತಿ ಜೊತೆ ಸೇರಿ ಡೀಲ್ ಕುದುರಿಸಲು ಮುಂದಾಗಿದ್ರಂತೆ. ಕೋರ್ಟ್ ಆದೇಶವಿದೆ‌ ಕಾಲೇಜು‌ ನಮ್ಮದು ಅಂತ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ವಿವಿಗೆ ಅಕ್ರಮವಾಗಿ ನುಗ್ಗಿದ್ದು, ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video