ಸದ್ದು ಮಾಡುತ್ತಿದೆ ಡಾಲಿ ಸ್ನೇಹಿತರ ಬಳಗದ ‘ಆರ್ಕೆಸ್ಟ್ರಾ ಮೈಸೂರು’: ಟ್ರೈಲರ್‌ಗೆ ಸಿಕ್ತು ಭಾರೀ ರೆಸ್ಪಾನ್ಸ್

'ಆರ್ಕೆಸ್ಟ್ರಾ ಮೈಸೂರು' ಸಿನಿಮಾದ ಟ್ರೈಲರ್ ಇದೀಗ ರಿಲೀಸ್ ಆಗಿದ್ದು, ಸ್ಯಾಂಡಲ್ ವುಡ್'ನಲ್ಲಿ ಸಣ್ಣಗೆ ಸದ್ದು ಶುರು ಮಾಡಿದೆ. 
 

Share this Video
  • FB
  • Linkdin
  • Whatsapp

'ಆರ್ಕೆಸ್ಟ್ರಾ ಮೈಸೂರು’ ಚಿತ್ರದ ಟ್ರೈಲರ್‌ ಬಿಡುಗಡೆ ಆಗಿದ್ದು, ವಿಶೇಷ ಏನೆಂದರೆ ಈ ಚಿತ್ರದಲ್ಲಿನ ಎಂಟು ಹಾಡುಗಳನ್ನು ಡಾಲಿ ಧನಂಜಯ್‌ ಬರೆದಿದ್ದಾರೆ. ಇದು ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ. ಸುನೀಲ್ ಮೈಸೂರು ನಿರ್ದೇಶನದ ಈ ಸಿನಿಮಾದಲ್ಲಿ, ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದು ನಾಯಕಿಯಾಗಿ ರಾಜಲಕ್ಷ್ಮೀ ಕಾಣಿಸಿಕೊಂಡಿದ್ದಾರೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಈ ಸಿನಿಮಾವನ್ನ ಅರ್ಪಿಸುತ್ತಿದ್ದು, ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ನಿರ್ಮಾಣ ಮಾಡಿದ್ದಾರೆ. ರಘು ದೀಕ್ಷಿತ್ ಸಂಗೀತವಿದ್ದು, ಇದೇ ಜನವರಿ 12ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


ಮೈಸೂರಿನಲ್ಲಿ ಹಸೆಮಣೆ ಏರಲಿರುವ 'ಸಿಂಹಪ್ರಿಯಾ': ಮದುವೆ ಯಾವಾಗ ಗೊತ್ತಾ?

Related Video