ಮೈಸೂರಿನಲ್ಲಿ ಹಸೆಮಣೆ ಏರಲಿರುವ 'ಸಿಂಹಪ್ರಿಯಾ': ಮದುವೆ ಯಾವಾಗ ಗೊತ್ತಾ?

ಹೊಸ ವರ್ಷದ ಆರಂಭದಲ್ಲೇ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಹಸೆಮಣೆ ಏರುತ್ತಿದ್ದಾರೆ. ಈ ಲವ್ ಬರ್ಡ್ಸ್ ಮದುವೆ ದಿನಾಂಕದ ಗುಟ್ಟನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ರಿವೀಲ್ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ನೀರ್ದೋಸೆ ಬ್ಯೂಟಿ ಹರಿಪ್ರಿಯಾ ಕಂಚಿನ ಕಂಠದ ಸುಂದರ ವಸಿಷ್ಠ ಸಿಂಹ ಜೊತೆಗಿರೋ ಫೋಟೋವನ್ನು, ಸಂಸದ ಪ್ರತಾಪ್ ಸಿಂಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮದುವೆ ದಿನಾಂಕವನ್ನು ಹೇಳಿದ್ದಾರೆ. ವಸಿಷ್ಠ ಸಿಂಹ ಹರಿಪ್ರಿಯಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಸೆಮಣೆ ಏರಲು ಪ್ಲಾನ್ ಮಾಡಿದ್ದಾರೆ. ಗಣರಾಜ್ಯೋತ್ಸವದ ದಿನ ಅಂದ್ರೆ ಜನವರಿ 26ಕ್ಕೆ ಈ ಲವ್ ಬರ್ಡ್ಸ್ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹ ಮಾಡಿಕೊಳ್ಳಲಿದ್ದಾರೆ. ನಂತರ ತಮ್ಮ ಸಿನಿಮಾ ರಂಗದ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಳ್ಳಲಿದ್ದಾರೆ.

Related Video