Asianet Suvarna News Asianet Suvarna News

'ಫಾರೆಸ್ಟ್'ನಲ್ಲಿ ಓಡೋ ಓಡೋ‌‌ ಅಂತಾ ಓಡಿದ ಚಿಕ್ಕಣ್ಣ, ರಂಗಾಯಣ ರಘು..!

ಫಾರೆಸ್ಟ್‌ ಸಿನಿಮಾದ ಓಡೋ ಓಡೋ ಹಾಡಿನಲ್ಲಿ ಚಿಕ್ಕಣ್ಣ ರಂಗಾಯಣ ರಘು, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್(Sandalwood) ಉಪಾಧ್ಯಕ್ಷ ಚಿಕ್ಕಣ್ಣ ಸ್ನೇಹಿತರ ಜೊತೆಗೂಡಿ ಕಾಡಿನ ಕಥೆ ಹೇಳೋಕೆ ರೆಡಿ ಆಗಿದ್ದಾರೆ. ಆ ಸಿನಿಮಾವೇ ಫಾರೆಸ್ಟ್(Forest movie). ಈ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಫಾರೆಸ್ಟ್‌ನಲ್ಲಿ ಓಡೋ ಓಡೋ ಹಾಡಿನಲ್ಲಿ(Odo Odo Odo Song) ಚಿಕ್ಕಣ್ಣ(Chikkanna)  ರಂಗಾಯಣ ರಘು(Rangayana Raghu), ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಓಡೋ ಓಡೋ ಅಂತಾ ಶುರುವಾಗುವ ಹಾಡಿಗೆ ಪುನೀತ್ ಆರ್ಯ ಕ್ಯಾಚಿ ಮ್ಯಾಚಿ ಲಿರಿಕ್ಸ್ ಬರೆದಿದ್ದಾರೆ. ಗಾಯಕ ಕೈಲಾಸ್ ಖೇರ್ ಹಾಗೂ ಹರ್ಷ ಉಪ್ಪಾರ್ ಹಾಡಿಗೆ ಧ್ವನಿಯಾಗಿದ್ದು,ಧರ್ಮ ವಿಶ್ ಸಂಗೀತ ನೀಡಿದ್ದಾರೆ.ಶೇ. 80 ರಷ್ಟು ಸಿನಿಮಾದ ಕಥೆ ಕಾಡಿನಲ್ಲಿಯೇ ಸಾಗುತ್ತದೆ. ಹೀಗಾಗಿ ಚಿತ್ರಕ್ಕೆ ಫಾರೆಸ್ಟ್ ಎಂದು ಹೆಸರಿಡಲಾಗಿದೆ. ಈ ಹಿಂದೆ 'ಡಬಲ್ ಇಂಜಿನ್', 'ಬಾಂಬೆ ಮಿಠಾಯಿ', 'ಬ್ರಹ್ಮಚಾರಿ' ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಈ ಫಾರೆಸ್ಟ್ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಾಮಿಡಿ ಸಿನಿಮಾವಾಗಿದ್ದು, ಹಿರಿಯ ನಟ ಅವಿನಾಶ್ , ಪ್ರಕಾಶ್ ತುಮ್ಮಿನಾಡ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾಬಳಗದಲ್ಲಿದ್ದಾರೆ. 'ಫಾರೆಸ್ಟ್' ಸಿನಿಮಾಕ್ಕೆ ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕಾಂತರಾಜು ಎಂಬುವವರು ಹಣ ಹಾಕುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ವಾಲ್ಮಿಕಿ ಹಗರಣಕ್ಕೆ ತೆರೆಮರೆಯಲ್ಲೇ ಎಂಟ್ರಿ ಕೊಡ್ತಾ ಸಿಬಿಐ ? ಗೌಪ್ಯವಾಗಿ ಪ್ರಕರಣದ ಮಾಹಿತಿ ಕಲೆ ಹಾಕ್ತಿದ್ಯಾ?

Video Top Stories