ವಾಲ್ಮಿಕಿ ಹಗರಣಕ್ಕೆ ತೆರೆಮರೆಯಲ್ಲೇ ಎಂಟ್ರಿ ಕೊಡ್ತಾ ಸಿಬಿಐ ? ಗೌಪ್ಯವಾಗಿ ಪ್ರಕರಣದ ಮಾಹಿತಿ ಕಲೆ ಹಾಕ್ತಿದ್ಯಾ?

ಬ್ಯಾಂಕ್ ಸ್ಟೇಟ್ಮೆಂಟ್ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಸದ್ಯ ಸಿಬಿಐ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿರುವ ಮಾಲೀಕರು
ನಕಲಿ ಖಾತೆ ತೆರೆದಿರುವ ವಿಚಾರವೇ ಗೊತ್ತಿಲ್ಲ ಎನ್ನುತ್ತಿರುವ ಮಾಲೀಕರು

First Published Jul 7, 2024, 11:40 AM IST | Last Updated Jul 7, 2024, 11:40 AM IST

ವಾಲ್ಮೀಕಿ ಹಗರಣಕ್ಕೆ(Valmiki Corporation scam) ತೆರೆಮರೆಯಲ್ಲೇ ಸಿಬಿಐ(CBI) ಎಂಟ್ರಿ ಕೊಡ್ತಿದ್ದಂತೆ ಕಾಣುತ್ತಿದೆ. ಈಗಾಗಲೇ ಗೌಪ್ಯವಾಗಿ ಪ್ರಕರಣದ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆಯಂತೆ. ಈಗಾಗಲೇ ತನಿಖೆಯಲ್ಲಿ ಮಹತ್ತರ ಘಟ್ಟವನ್ನು ಎಸ್‌ಐಟಿ (SIT)ತಲುಪಿದೆ. ಪ್ರಾರಂಭದಿಂದಲೂ ಸಿಬಿಐಗೆ ಪ್ರಕರಣ ವರ್ಗಾವಣೆಯಾಗೋ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅಂದುಕೊಂಡಂತೆ ಪ್ರಕರಣದ ತನಿಖೆ ಆರಂಭಿಸಿರುವ ಸಿಬಿಐ. 187 ಕೋಟಿ ಹಗರಣ ಎಂದ ಕೂಡಲೇ ಪ್ರಕರಣಕ್ಕೆ ಎಂಟ್ರಿಯಾಗಿರೋ ಸಿಬಿಐ. 200 ಖಾತೆಗಳಿಗೆ ಹಣ ವರ್ಗಾವಣೆ ಕುರಿತು ಮಾಹಿತಿ ಕಲೆ ಹಾಕಿದೆಯಂತೆ. ಈಗಾಗಲೇ ಅಕೌಂಟ್ ಮಾಲೀಕರ ವಿಚಾರಣೆ ನಡೆಸಿರುವ ಸಿಬಿಐ, ನಕಲಿ ಬ್ಯಾಂಕ್ ಖಾತೆ ತೆರೆಯಲು ಬಳಸಿದ್ದ ಕಂಪನಿ ಮಾಲೀಕರ ವಿಚಾರಣೆ ನಡೆಸಿದೆ. ಬ್ಯಾಂಕ್ ಸ್ಟೇಟ್‌ಮೆಂಟ್ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಸದ್ಯ ಸಿಬಿಐ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿರುವ ಮಾಲೀಕರು, ನಕಲಿ ಖಾತೆ ತೆರೆದಿರುವ ವಿಚಾರವೇ ಗೊತ್ತಿಲ್ಲ ಎನ್ನುತ್ತಿದ್ದಾರಂತೆ.

ಇದನ್ನೂ ವೀಕ್ಷಿಸಿ:  ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಬೆಂಬಲಿಗರಿಗೂ ಉರುಳಾಗುತ್ತಾ ಈ ಪ್ರಕರಣ..?

Video Top Stories