ಮಿಲನ ಪ್ರಕಾಶ್ ವಿಚಾರಣೆ ಮಾಡಿದ್ದೇಕೆ ಪೊಲೀಸರು ? 'ಡೆವಿಲ್' ನಿರ್ದೇಶಕರಿಗೂ ದರ್ಶನ್ ಕೇಸ್‌ಗೂ ಏನು ಸಂಬಂಧ?

 ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ನಿರ್ದೇಶಕ ಮಿಲನ ಪ್ರಕಾಶ್ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.

First Published Jul 7, 2024, 9:18 AM IST | Last Updated Jul 7, 2024, 9:18 AM IST

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ(Renukaswamy murder case) ಈಗಾಗಲೇ ದರ್ಶನ್, ಪವಿತ್ರಾ ಗೌಡ ಸೇರಿ ಅನೇಕರ ಬಂಧನ ನಡೆದಿದೆ. ಪ್ರಕರಣದ ಜೊತೆ, ದರ್ಶನ್(Darshan) ಜೊತೆ ಲಿಂಕ್ ಹೊಂದಿರೋ ಎಲ್ಲರನ್ನೂ ವಿಚಾರಣೆ ಮಾಡಲಾಗುತ್ತಿದೆ. ಈ ವೇಳೆ ಯಾವೆಲ್ಲ ಮಾಹಿತಿ ಹೊರ ಬೀಳುತ್ತದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಈ ಸಂಬಂಧ ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ(Devil movie) ನಿರ್ದೇಶಕ ಮಿಲನ ಪ್ರಕಾಶ್ (Milan Prakash) ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರ್ದೇಶನ ಮಿಲನ ಪ್ರಕಾಶ್ ಅವರನ್ನು ವಿಚಾರಣೆ ಮಾಡಲಾಗಿದೆ ಎಂದು ವರದಿಯಾಗಿದೆ. ದರ್ಶನ್ ಜೈಲು ಸೇರಿದ ಮೇಲೆ ತೀವ್ರಗೊಂಡ ವಿಚಾರಣೆಯಲ್ಲಿ ಯಶಸ್ಸು ಸೂರ್ಯ, ವಿಲನ ಪ್ರಕಾಶ್ ಅಂತಹ ಹೆಸರುಗಳು ಬಂದಿವೆ. ಇಷ್ಟಕ್ಕೂ ದರ್ಶನ್ ಕೇಸ್‌ನಲ್ಲಿ ಮಿಲನ ಪ್ರಕಾಶ್‌ಗೆ ಪೊಲೀಸರು ನೋಟಿಸ್ ಕೊಟ್ಟಿದ್ದು ಏಕೆ? ಈ ಕೇಸ್ಗೂ ಮಿಲನ ಪ್ರಕಾಶ್ಗೂ ಏನು ಸಂಬಂಧ? ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ಒಂದಿಷ್ಟು ಸುದ್ದಿಗಳು ಓಡಾಡುತ್ತಿದೆ. ಅಷ್ಟಕ್ಕೂ ಒಂದೂವರೆ ಗಂಟೆಯಲ್ಲಿ ಪೊಲೀಸರು ಮಿಲನ ಪ್ರಕಾಶ್ರಿಂದ ಏನೆಲ್ಲ ಮಾಹಿತಿ ಪಡೆದರು ಅನ್ನೋದು ಕುತೂಹಲ ಮೂಡಿಸಿದೆ. ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ನಿರ್ಮಾಪಕ ಕಮ್ ನಿರ್ದೇಶಕ ಮಿಲನ ಪ್ರಕಾಶ್ಗೆ ನೋಟಿಸ್ ನೀಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಿದ್ದರು. ಎಸಿಪಿ ಕಚೇರಿಯಲ್ಲಿ ಇವರನ್ನು ವಿಚಾರಣೆಗೆ ಹಾಜರಾಗಿದ್ದು, ರೇಣುಕಾಸ್ವಾಮಿ ಕೊಲೆಯಾದ ಬಳಿಕ ಮೈಸೂರಿನಲ್ಲಿ ದರ್ಶನ್ 'ಡೆವಿಲ್' ಸಿನಿಮಾ ಶೂಟಿಂಗ್ಗೆ ಭಾಗಿಯಾಗಿದ್ದರು. ಅಲ್ಲಿನ ಕೆಲವು ವಿಚಾರಗಳನ್ನು ಮಿಲನ ಪ್ರಕಾಶ್ ಅವರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ:  ಕಬಾಬ್‌ನಲ್ಲೂ .. ಗೋಬಿಯಲ್ಲೂ ವಿಷ..! ಸರ್ಕಾರ ಬ್ಯಾನ್ ಮಾಡಿದ್ರೂ ವ್ಯಾಪಾರಿಗಳು ಬಿಡ್ತಿಲ್ಲ..!

Video Top Stories