ಕಬಾಬ್‌ನಲ್ಲೂ .. ಗೋಬಿಯಲ್ಲೂ ವಿಷ..! ಸರ್ಕಾರ ಬ್ಯಾನ್ ಮಾಡಿದ್ರೂ ವ್ಯಾಪಾರಿಗಳು ಬಿಡ್ತಿಲ್ಲ..!

ಕಬಾಬ್‌ನಲ್ಲಿ ಕೆಮಿಕಲ್ ಯುಕ್ತ ಕಲರ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲೂ ಕೆಲ ಕಲರ್ ಬಳಕೆಯನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ನಿಷೇಧ ಮಾಡಿದೆ.

First Published Jul 7, 2024, 9:13 AM IST | Last Updated Jul 7, 2024, 9:13 AM IST

ಕಲರ್ ಕಲರ್ ಕಬಾಬ್.. ಬಣ್ಣ ಬಣ್ಣದ ತಿನಿಸುಗಳು.. ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ.ಅಂತಾ ನೀವೆನಾದ್ರೂ ಆ ಕಲರ್ ಕಲರ್ ಕಬಾಬ್(Kebab) ಅನ್ನ ತಿಂದ್ರೆ ನಿಮ್ಮ ಆರೋಗ್ಯ ಹಾಳಾಗೋದು ಗ್ಯಾರಂಟಿ. ಬೊಂಬಾಯಿ ಮಿಠಾಯಿಗೆ ಹಾಕುವ ಪಿಂಕ್ ಕಲರ್ ಅನ್ನ ಬ್ಯಾನ್ ಮಾಡಲಾಗಿದೆ. ಅದರಲ್ಲಿ ವಿಷಕಾರ ಪದಾರ್ಥ ಇರುವ ಕಾರಣ ಮಿಠಾಯಿಯಲ್ಲಿ ಆ ಕಲರ್ ಅನ್ನ ಬಳಸದಂತೆ ಸರ್ಕಾರ ಬ್ಯಾನ್(Ban) ಮಾಡಿದೆ. ಕಾಟನ್ ಕ್ಯಾಂಡಿಯಲ್ಲಿ ವಿಷಕಾರಕ ರೊಡೋಮೈನ್ ಬಿ ಅನ್ನುವ ವಿಷಕಾರಕ ಕೆಮಿಕಲ್ ಆರೋಗ್ಯ ಇಲಾಖೆಯ ಪರೀಕ್ಷೆ ವೇಳೆ ಪತ್ತೆಯಾಗಿದೆ.ಈ ಹಿನ್ನೆಲೆ ರಂಗು ರಂಗಿನ ಕಾಟನ್ ಕ್ಯಾಂಡಿಯನ್ನ(Cotton candy) ನಿಷೇದ ಮಾಡಲಾಗಿದೆ. ಉಳಿದಂತೆ ಬಿಳಿಬಣ್ಣದ ಮತ್ತು ಬಣ್ಣ ಹಾಕದ ಕಾಟನ್ ಕ್ಯಾಂಡಿಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕಾಟನ್ ಕ್ಯಾಂಡಿ ಜೊತೆಗೆ ಜನ ಅತ್ಯಂತ ಹೆಚ್ಚು ಇಷ್ಟಪಡುವ ಪದಾರ್ಥವೇ ಕಬಾಬ್. ಕಬಾಬ್ ಅನ್ನ ಮೂರ್ನಾಲ್ಕು ಕಲರ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಚಿತ್ರ ವಿಚಿತ್ರ ಕಲರ್‌ಗಳನ್ನ ಕಬಾಬ್ ತಯಾರಿಕೆಯ ವೇಳೆ ನಿಷೇಧ ಮಾಡಲಾಗಿದೆ. ಅಂದರೆ, ಕಬಾಬ್ ತಯಾರಿಸಬಹುದು. ಆದರೆ, ಆ ತಯಾರಿಕೆ ವೇಳೆ ಯಾವುದೇ ಕೆಮಿಕಲ್ ಯುಕ್ತ ಕಲರ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲೂ ಕೆಲ ಕಲರ್ ಬಳಕೆಯನ್ನ ರಾಜ್ಯ ಸರ್ಕಾರ ಕಡ್ಡಾಯವಾಗಿ ನಿಷೇಧ ಮಾಡಿದೆ. 

ಇದನ್ನೂ ವೀಕ್ಷಿಸಿ:  News Hour: ಜೈಲಿನಲ್ಲೇ ಹೈವೋಲ್ಟೇಜ್‌ ಮೀಟಿಂಗ್‌, ದರ್ಶನ್‌ ಉಳಿಸೋಕೆ ಮುಂದಾದ ಕುಟುಂಬ!