ಪರಭಾಷೆ ಚಿತ್ರಗಳ ಆರ್ಭಟ..ಕನ್ನಡ ಸಿನಿಮಾಗಳಿಗೆ ಸ್ಕ್ರೀನ್ ಬರ..!
ಹೌಸ್ ಫುಲ್ ಪ್ರದರ್ಶನ ಕಾಂತಿದ್ದ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಗೆ ಪರಭಾಷೆ ಚಿತ್ರಗಳ ವಕ್ರದೃಷ್ಟಿ ಬಿದ್ದಿದೆ. ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿಗಳಿಂದ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ತೆಗೆದು ಹಾಕಲಾಗಿದೆ ಅಂತ ಚಿತ್ರತಂಡ ಆಕ್ರೋಶ ವ್ಯಕ್ತ ಪಡಿಸಿದೆ.
ಕನ್ನಡದ ಸಿನಿಮಾಗಳಿಗೆ ಸರಿಯಾದ ರೀತಿಯಲ್ಲಿ ಚಿತ್ರಮಂದಿರಗಳು ಸಿಗುವುದಿಲ್ಲ ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಕನ್ನಡದ ಕೌಸಲ್ಯ ಸುಪ್ರಜಾ ರಾಮ ಸಿನಿಮಾ(Kousalya Supraja Rama) ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಆದರೆ ಈಗ ಪರಭಾಷಾ ಸಿನಿಮಾಗಳ ಎಂಟ್ರಿಯಿಂದ ಈ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗಿದೆ. ಈ ಬಗ್ಗೆ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರತಂಡ ಧ್ವನಿ ಎತ್ತಿದೆ. ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ(Multiplex) ಕನ್ನಡದ ಸಿನಿಮಾಗಳ ಬದಲಿಗೆ ಪರಭಾಷೆಯ ಚಿತ್ರಗಳಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ ಎಂದು ಆರೋಪಿಸಲಾಗಿದೆ. ಇನ್ನು ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಗೆ ಜನರೇ ಬರದಿರೋ ಟೈಂಗೆ ಚಿತ್ರ ಮಂದಿರದವರು ಸ್ಕ್ರೀನ್ ಕೊಡ್ತಿದ್ದಾರೆ. ಬೆಳಗ್ಗೆ 8.30ರ ಶೋ ಕೊಟ್ರೆ ಯಾರ್ ಬರ್ತಾರೆ, ಹೌಸ್ ಫುಲ್ ಪ್ರದರ್ಶನ ಕಾಂತಿರೋ ಸ್ಕ್ರೀನ್‌ಗಳಿಂದ ಸಿನಿಮಾ ತೆಗೆದು ಹಾಕ್ತಿದ್ದಾರೆ ಅಂತ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ನಿರ್ದೇಶಕ ಶಶಾಂಕ್ ಆಕ್ರೋಶಗೊಂಡಿದ್ದಾರೆ. ಬ್ಯಾಕ್ ಟಯ ಬ್ಯಾಕ್ ಆಗಿ ಪರಭಾಷೆ ಚಿತ್ರಗಳು(other languages Movies) ರಿಲೀಸ್ ಆಗ್ತಿದ್ದು, ಜೈಲರ್ ಸಿನಿಮಾ ಎಲ್ಲಾ ಸ್ಕ್ರೀನ್‌ಗಳನ್ನ ಕಬ್ಜಾ ಮಾಡಿಕೊಂಡಿದೆ. ಅಲ್ಲದೇ ಚಿರಂಜೀವಿ ಅವರ ಭೋಲಾ ಶಂಕರ ಸಿನಿಮಾಗೂ ಸ್ಕ್ರೀನ್‌ಗಳು ಸಿಗ್ತಿದೆ. ಆದ್ರೆ ಪರಭಾಷೆಯ ಈ ಚಿತ್ರಗಳಿಂದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸೂಕ್ತ ರೀತಿಯಲ್ಲಿ ಶೋಗಳು ಸಿಗದೇ ತೊಂದರೆಯಾಗ್ತಿದೆ.ಈ ಸಮಸ್ಯೆಗೆ ಪರಿಹಾರ ಕೋರಿ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದೆ.
ಇದನ್ನೂ ವೀಕ್ಷಿಸಿ: 9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!