ಸೀರಿಯಲ್‌ ನಟ, ನಟಿಯರೇ ಕಿಲಾಡಿ ಲೇಡಿ ಟಾರ್ಗೆಟ್‌: ಬಗೆದಷ್ಟು ಬಯಲ್ತಾಗಿದೆ ನಿಶಾ ವಂಚನೆ ಜಾಲ

ಆರೋಪಿ ನಿಶಾ ನರಸಪ್ಪ ಕೇವಲ ಮಕ್ಕಳ ಪೋಷಕರು ಅಲ್ಲದೇ, ಸೀರಿಯಲ್ ಆರ್ಟಿಸ್ಟ್‌ಗಳನ್ನು ಸಹ ಟಾರ್ಗೆಟ್‌ ಮಾಡಿ ವಂಚನೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಖ್ಯಾತ ನಿರೂಪಕ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ (Vamshika) ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಮಕ್ಕಳ ಪೋಷಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ(24)( Nisha Narsappa) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಮೇಲೆ ಫೋಟೋಶೂಟ್‌ ಹೆಸರಿನಲ್ಲಿ ಮಕ್ಕಳ ಪೋಷಕರನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಬಗೆದಷ್ಟು ಬಯಲಾಗ್ತಿದೆ ನಿಶಾ ನರಸಪ್ಪಳ ಅಸಲಿಯತ್ತು. ಇದೀಗ ಈಕೆ ನಾನಾ ರೀತಿಯಲ್ಲಿ ಜನರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಸಿರಿಯಲ್‌ ಆರ್ಟಿಸ್ಟ್‌ಗಳನ್ನು(serial artistes) ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದಳು ಎಂದು ತಿಳಿದುಬಂದಿದೆ. ಮಿಸ್‌ ಕರ್ನಾಟಕ, ಮಿಸ್ಟರ್‌ ಕರ್ನಾಟಕ ಮಾಡ್ತೀನಿ ಎಂದು ಹೇಳಿ ಹಣವನ್ನು ಪಡೆದು ಮೋಸ (cheat) ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ರಮ್ಯಾ ಎಂಬುವವರಿಗೆ ಮಿಸ್‌ ಕರ್ನಾಟಕ ಮಾಡ್ತೀನಿ ಎಂದು ಹೇಳಿ ಹಣ ಪಡೆದು ವಂಚಿಸಿದ್ದಾಳೆ.

ಇದನ್ನೂ ವೀಕ್ಷಿಸಿ:  ಟೋಪಿ ಖರೀದಿಸಿದ ಹಣ ಕೇಳಿದ ಅಂಗಡಿ ಮಾಲೀಕ: ಇದಕ್ಕೆ ಆ ವ್ಯಕ್ತಿ ಮಾಡಿದ್ದೇನು ಗೊತ್ತಾ?

Related Video