Sandalwood: ಈ ವರ್ಷ ಕನ್ನಡ ಸಿನಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ..! ಈ ವರ್ಷ ರಿಲೀಸ್ ಆಗುತ್ತೆ 'ಕಾಂತಾರ ಚಾಪ್ಟರ್1'!

2023 ಇನ್ನು ನೆನಪು ಮಾತ್ರ. ಹೊಸ ವರ್ಷ ಆರಂಭ ಆಯ್ತು. ಕನ್ನಡ ಸಿನಿ ಪ್ರೇಕ್ಷಕರು ಈ ನ್ಯೂ ಈಯರ್ನಲ್ಲಿ ಸ್ಟಾರ್ ಸಿನಿಮಾಗಳನ್ನ ನೋಡೋ resolution ಹಾಕೊಂಡಿದ್ದಾರೆ. ಅಂತಹ ಸಿನಿ ಪ್ರೇಕ್ಷಕರಿಗೆ ಈ ವರ್ಷ ಕನ್ನಡ ಸಿನಿಮಾಗಳದ್ದೇ ಹಬ್ಬ ಮಾಡ್ತಾರೆ. ಈ ವರ್ಷ ಸಾಲು ಸಾಲು ಬಿಗ್ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗ್ತಿವೆ.

First Published Jan 2, 2024, 9:11 AM IST | Last Updated Jan 2, 2024, 9:11 AM IST

ಈ ವರ್ಷ ಸಿನಿಮಾ ಮಂದಿಗೆ ಸುಗ್ಗಿ ಹಬ್ಬ. ಬಿಗ್ ಸ್ಟಾರ್ಗಳು ಬೆಳ್ಳಿತೆರೆ ಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಆ ಲೀಸ್ಟ್ನಲ್ಲಿ ಫಸ್ಟ್ ಇರೋದೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರೋ ಭೀಮ.. ಫೆಬ್ರವರಿಯಲ್ಲಿ ಭೀಮ(Bheema movie)ತೆರೆ ಮೇಲೆ ಬರುತ್ತಿದೆ. ಈ ಸಿನಿಮಾ ಬಳಿಕ ಅಣ್ಣಾವ್ರ ಮೊಮ್ಮಗ ಯುವ ರಾಜ್ಕುಮಾರ್(Yuva Rajkumar) ನಟಿಸಿರೋ ಯುವ ಸಿನಿಮಾ ಮಾರ್ಚ್ 28ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತೆ. ಬಾದ್ ಷಾ ಕಿಚ್ಚ ಸುದೀಪ್(Sudeep) ಕೂಡ ಈ ವರ್ಷ ಎರಡು ಸಿನಿಮಾ ರಿಲೀಸ್ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಅದರಲ್ಲೊಂದು ಮ್ಯಾಕ್ಸ್(Max). ಈ ಸಿನಿಮಾದ ಶೂಟಿಂಗ್ ಮುಗಿಯೋ ಹಂತಕ್ಕೆ ಬಂದಿದ್ದು, ರಿಲೀಸ್ ಡೇಟ್ ಅನೌನ್ಸ್ ಸಧ್ಯದಲ್ಲೇ ಆಗುತ್ತೆ. ಕಿಚ್ಚನ ಮ್ಯಾಕ್ಸ್ ದರ್ಬಾರ್ ಒಂದ್ ಕಡೆ ಆದ್ರೆ ಪ್ಯಾನ್ ಇಂಡಿಯಾದಲ್ಲಿ ಕೆಡಿ ಆರ್ಭಟವೂ ಇರುತ್ತೆ. ಧ್ರವ ಸರ್ಜಾ ನಟನೆಯ ಕೆಡಿ ಸಿನಿಮಾ ಕೂಡ ಇದೇ ವರ್ಷ ರಿಲೀಸ್ ಆಗ್ತಿದೆ. ಈ ವರ್ಷ ಧ್ರುವ ಸರ್ಜಾ(Dhruva Sarja) ಎರಡು ಸಿನಿಮಾ ರಿಲೀಸ್ ಆಗ್ತಿವೆ. ಒಂದು ಕೆಡಿ ಆದ್ರೆ ಮತ್ತೊಂದು ಮಾರ್ಟಿನ್ ಸಿನಿಮಾ ಕೂಡ ತೆರೆ ಕಾಣುತ್ತೆ. ಇದರ ಜೊತೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಹಾಗು ಬುದ್ಧಿವಂತ2 ಸಿನಿಮಾಗಳು ಇದೇ ಈಯರ್ ರಿಲೀಸ್ ಆಗ್ತಿವೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ವರ್ಷ ಅದ್ಧೂರಿ ಎಂಟರ್ಟೈನ್ಮೆಂಟ್ ಕೊಡ್ತಾರೆ. ಇಡೀ ದೇಶದ ಸಿನಿ ಪ್ರೇಕ್ಷಕರು ಕಾಯುತ್ತಿರೋ ಕಾಂತಾರ(Kantara) ಚಾಪ್ಟರ್ ಒನ್ ಸಿನಿಮಾ ಇದೇ ವರ್ಷದ ಕೊನೆಯಲ್ಲಿ ವರ್ಲ್ಡ್ ವೈಡ್ ತೆರೆ ಕಾಣುತ್ತೆ. 

ಇದನ್ನೂ ವೀಕ್ಷಿಸಿ:  Kaatera : ನಾಲ್ಕು ದಿನದಲ್ಲಿ 'ಕಾಟೇರ' ಗಳಿಸಿದ್ದೆಷ್ಟು..? ಸಿನಿಮಾ ನೋಡಿ ಮೆಚ್ಚಿದ ಸಚಿವ ಪ್ರಲ್ಹಾದ್ ಜೋಶಿ..!

Video Top Stories