Kaatera : ನಾಲ್ಕು ದಿನದಲ್ಲಿ 'ಕಾಟೇರ' ಗಳಿಸಿದ್ದೆಷ್ಟು..? ಸಿನಿಮಾ ನೋಡಿ ಮೆಚ್ಚಿದ ಸಚಿವ ಪ್ರಲ್ಹಾದ್ ಜೋಶಿ..!
ರಾಕ್‌ಲೈನ್ ವೆಂಕಟೇಶ್. ಸ್ಯಾಂಡಲ್‌ವುಡ್ ಸ್ಟಾರ್ ಪ್ರ್ಯೂಡ್ಯೂಸರ್ 1992ರಿಂದ ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನ ಕೊಡುತ್ತಿರೋ ನಿರ್ಮಾಪಕ ರಾಕ್‌ಲೈನ್ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಬಿಗ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಅದೇ ನಟ ದರ್ಶನ್ ಅಭಿನಯಿಸಿರೋ ಕಾಟೇರ. ಕಾಟೇರ ರಿಲೀಸ್ ಆಗಿದ್,ದು ಕಳೆದ ಶುಕ್ರವಾರ. ಈ ಸಿನಿಮಾದ ಬಾಕ್ಸಾಫೀಸ್ ಬೇಟೆ ಈ ವಾರವೂ ಕಂಟಿನ್ಯೂ ಆಗಿದೆ.
ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ(Kaatera movie) ಡಿಸೆಂಬರ್ 29ರಂದು ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಎರಡನೇ ದಿನ ಈ ಸಿನಿಮಾ 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ ಈ ಚಿತ್ರ 20.94 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವಿಷಯವನ್ನ ಕಾಟೇರ ಚಿತ್ರತಂಡವೇ ಅನೌನ್ಸ್ ಮಾಡಿದೆ. ಅಲ್ಲಿಗೆ ಕಾಟೇರ ನಾಲ್ಕು ದಿನದ ಒಟ್ಟು ಕಲೆಕ್ಷನ್(Collection) 60 ಕೋಟಿ ದಾಟಿದೆ. ತರುಣ್ ಸುಧೀರ್(Tharun Sudhir) ನಿರ್ದೇಶನದ ಕಾಟೇರ ಸಿನಿಮಾವನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಹುಬ್ಬಳ್ಳಿಯಲ್ಲಿ ನೋಡಿದ್ದಾರೆ. ಅವರ ಜೊತೆ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಸಾಥ್ ನೀಡಿದ್ದಾರೆ. ಕಾಟೇರ ಸಿನಿಮಾದ ಪ್ರಲ್ಹಾದ್ ಜೋಶಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಾಟೇರ ಬಿಗ್ ಹಿಟ್ ಅಗ್ತಿರೋದಕ್ಕೆ ಮೈನ್ ರೀಸನ್ ಸಿನಿಮಾದ ಸ್ಟೋರಿ. ಉಳುವವನೇ ಭೂ ವಡೆಯ ಕಥೆಗೆ ಲಿಂಗ್ ಕೊಟ್ಟು ಮಾಸ್ ಎಲಿಮೆಂಟ್ಸ್ ಇಟ್ಟು ಸ್ಟೋರಿ ಬರೆದ್ದಾರೆ. ಈ ಕಥೆ 70ರ ದಶಕದಲ್ಲಿ ನಡೆಯುತ್ತೆ. ಹೀಗಾಗಿ ನಟ ದರ್ಶನ್ರನ್ನ ಕಾಟೇರದಲ್ಲಿ ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾರೆ.. ಒಟ್ಟಿನ್ಲಲಿ ಈ ವರ್ಷದ ಕೊನೆಯಲ್ಲಿ ಬಂದ ಕನ್ನಡದ ಹಿಟ್ ಸಿನಿಮಾ ಕಾಟೇರ ರೆಕಾರ್ಡ್ ಬುಕ್ ಸೇರಿದೆ.
ಇದನ್ನೂ ವೀಕ್ಷಿಸಿ: Today Horoscope: ಹೊಸ ವರ್ಷದ 2ನೇ ದಿನ ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ?