ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡಗೆ ಫುಲ್ ಕ್ಲಾಸ್! ರೀಲ್ಸ್‌ಗಾಗಿ ಗಂಡನನ್ನೇ ಬಿಟ್ಟ ಮಹಾನ್ ತ್ಯಾಗಿಯಂತೆ !

ಸದ್ಯ ಕರ್ನಾಟಕದಲ್ಲಿ ರೀಲ್ಸ್‌ಗೆ ಮುಕುಟ ಮಣಿ ಅಂದ್ರೆ ಅದು ನಿವೇದಿತಾ ಗೌಡ. ನಿವಿ ಮಾಡೋ ಒಂದೊಂದು ರೀಲ್ಸ್‌ಗಳು ಲಕ್ಷ ಲಕ್ಷ ವೀವ್ಸ್ ಪಡಿತಾವೇ. ಆದ್ರೆ ಈಗ ಈ ರೀಲ್ಸ್ ನೋಡಿ ಕೆಲ ವೀವರ್ಸ್ ನಿವಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರೀಲ್ಸ್ ಮಾಡೋದಕ್ಕಾಗಿ ಗಂಡನನ್ನ ಬಿಟ್ಟ ಮಹಾನ್ ತ್ಯಾಗಿ ನಿವೇದಿತಾ ಅಂತ ಜರಿಯುದಿದ್ದಾರೆ.

First Published Jul 7, 2024, 10:53 AM IST | Last Updated Jul 7, 2024, 10:54 AM IST

ಬಿಗ್‌ಬಾಸ್‌ ಮನೆಯಲ್ಲಿ ಪರಿಚಯ ಆಗಿ, ಆ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ, ಈ ಪ್ರೀತಿಯಿಂದ ಸತಿ ಪತಿಯಾಗಿದ್ರು ನಿವೇದಿತಾ (Niveditha Gowda) ಹಾಗು ಚಂದನ್(Chandan shetty). ಆದ್ರೆ ಇವರಿಬ್ಬರ ಸತಿ ಪತಿಯ ಜೀವನ ವಿಚ್ಛೇಧನದಲ್ಲಿ(Divorce) ಅಂತ್ಯವಾಗಿದೆ. ಇವರಿಬ್ಬರ ಡಿವೋರ್ಸ್ ಸುದ್ದಿ ಇಬ್ಬರ ಡೈ ಹಾರ್ಡ್ ಫಾಲೋರ್ಸ್ಗೆ ಶಾಕ್ ಕೊಟ್ಟಿತ್ತು. ರಾತ್ರಿಯೆಲ್ಲಾ ಚನ್ನಾಗಿದ್ದವರು ಬೆಳಗಾಗೋ ಅಷ್ಟರಲ್ಲಿ ವಿಚ್ಛೇಧನ ಪಡೆದಿದ್ದಾರಲ್ಲಾ ಇದು ಹೇಗೆ ಅಂತ ತಲೆ ಕೆಡಿಸಿಕೊಂಡಿದ್ರು. ನಿವಿ ಚಂದನ್ ವಿಚ್ಛೇಧನ ಬಳಿಕ ಈಗ ನಿವೇದಿತಾ ಗೌಡ ಟಾರ್ಗೆಟ್ ಆಗುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್ ಮೀಡಿಯಾ ಫ್ರೀಕ್ ಆಗಿದ್ದ ನಿವೇದಿತಾ, ಈಗ  ಸರಣಿ ವೀಡಿಯೋಗಳನ್ನ(Reels) ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಚಂದನ್ ಜೊತೆ ವಿಚ್ಛೇಧನ ಪಡೆದ ಬಳಿಕ ನಿವಿಗೆ ಬ್ಯಾಡ್ ಕಮೆಂಟ್ಗಳ ಸುರಿಮಳೆ ಬರುತ್ತಿವೆ. ನಿವೇದಿತಾ ಗೌಡ-ಚಂದನ್ ಶೆಟ್ಟಿ ಡಿವೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವು ಊಹಾ-ಪೋಹಗಳು ಹಬ್ಬಿದ್ವು. ಆಗ್ಲೂ ನಿವೇದಿತಾ ಗೌಡರನ್ನೇ ಟಾರ್ಗೆಟ್ ಮಾಡಲಾಗಿತ್ತು. ಇವರಿಬ್ಬರ ವಿಚ್ಛೇದನದಲ್ಲಿ ನಟ ಸೃಜನ್ ಲೋಕೇಶ್‌ ಹೆಸರನ್ನ ತಳುಕು ಹಾಕಲಾಗಿತ್ತು. ಇದ್ಯಾಕೋ ಬೇರೆಯದ್ದೇ ದಾರಿ ಹಿಡಿಯುತ್ತಿದೆ ಅಂತ ಗೊತ್ತಾಗ್ತಿದ್ದ ಹಾಗೆ ನಿವಿ ಚಂದನ್ ಇಬ್ಬರೂ ಒಟ್ಟಿಗೆ ಬಂದು ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ರು. ಆದ್ರೂ ನಿವೇದಿತಾಗೆ ಕೆಟ್ಟ ಕಮೆಂಟ್‌ಗಳೇನು ಕಮ್ಮಿಯಾಗಿಲ್ಲ. 

ಇದನ್ನೂ ವೀಕ್ಷಿಸಿ:  ಜುಲೈ 12ಕ್ಕೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ! ಸಂಗೀತ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬ ಮಸ್ತ್ ಡ್ಯಾನ್ಸ್‌!

Video Top Stories